Red Hat Enterprise Linux 5.4

ಬಿಡುಗಡೆ ಟಿಪ್ಪಣಿಗಳು

ಎಲ್ಲಾ ಆರ್ಕಿಟೆಕ್ಚರುಗಳಿಗಾಗಿನ ಬಿಡುಗಡೆ ಟಿಪ್ಪಣಿಗಳು.

Red Hat ಇಂಜಿನಿಯರಿಂಗ್ ಕಂಟೆಂಟ್ ಸೇವೆಗಳು

Legal Notice

Copyright © 2009 Red Hat, Inc.. This material may only be distributed subject to the terms and conditions set forth in the Open Publication License, V1.0 or later (the latest version of the OPL is presently available at http://www.opencontent.org/openpub/).
Red Hat and the Red Hat "Shadow Man" logo are registered trademarks of Red Hat, Inc. in the United States and other countries.
All other trademarks referenced herein are the property of their respective owners.


1801 Varsity Drive
RaleighNC 27606-2072 USA
Phone: +1 919 754 3700
Phone: 888 733 4281
Fax: +1 919 754 3701
PO Box 13588 Research Triangle ParkNC 27709 USA

ಸಾರಾಂಶ
1ನೆ ಜುಲೈ 2009
Red Hat Enterprise Linux 5.4 ರ ಬಿಡುಗಡೆ ಟಿಪ್ಪಣಿಗಳನ್ನು ವಿವರಿಸುತ್ತದೆ.

1. ವರ್ಚುವಲೈಸೇಶನ್ ಅಪ್‌ಡೇಟುಗಳು
2. ಕ್ಲಸ್ಟರಿಂಗ್ ಅಪ್‌ಡೇಟ್‌ಗಳು
2.1. ಫೆನ್ಸಿಂಗ್ ಸುಧಾರಣೆಗಳು
3. ಜಾಲಬಂಧ ಅಪ್‌ಡೇಟ್‌ಗಳು
4. ಕಡತವ್ಯವಸ್ಥೆ ಅಪ್‌ಡೇಟ್‌ಗಳು
5. ಗಣಕತೆರೆ ಅಪ್‌ಡೇಟ್‌ಗಳು
5.1. ಅಡ್ವಾನ್ಸಡ್ ಲಿನಕ್ಸ್ ಧ್ವನಿ ಆರ್ಕಿಟೆಕ್ಚರ್(ALSA)
5.2. ಗ್ರಾಫಿಕ್ಸ್ ಚಾಲಕಗಳು
5.3. ಲ್ಯಾಪ್‌ಟಾಪ್ ಬೆಂಬಲ
6. ಉಪಕರಣಗಳ ಅಪ್‌ಡೇಟ್‌ಗಳು
7. ಆರ್ಕಿಟೆಕ್ಚರ್ ನಿಶ್ಚಿತ ಬೆಂಬಲ
7.1. i386
7.2. x86_64
7.3. PPC
7.4. s390
8. ಕರ್ನಲ್ ಅಪ್‌ಡೇಟ್‌ಗಳು
8.1. ಸಾಮಾನ್ಯ ಕರ್ನಲ್ ಸವಲತ್ತು ಬೆಂಬಲ
8.2. ಸಾಮಾನ್ಯ ಪ್ಲಾಟ್‌ಫಾರ್ಮ್ ಬೆಂಬಲ
8.3. ಚಾಲಕ ಅಪ್‌ಡೇಟ್‌ಗಳು
9. ತಂತ್ರಜ್ಞಾನ ಮುನ್ನೋಟಗಳು
A. ಪುನರಾವರ್ತನೆಯ ಇತಿಹಾಸ
ಈ Red Hat Enterprise Linux 5.4 (ಕರ್ನಲ್-2.6.18-154.EL) ಕುಲದ ಈ ಉತ್ಪನ್ನಗಳಿಗಾಗಿನ ಬಿಡುಗಡೆ ಟಿಪ್ಪಣಿಗಳನ್ನು ಹೊಂದಿದೆ:
  • x86, AMD64/Intel® 64, Itanium Processor Family, System p ಹಾಗು System z ಗಾಗಿನ Red Hat Enterprise Linux 5 ಅಡ್ವಾನ್ಸಡ್ ಪ್ಲಾಟ್‌ಫಾರ್ಮ್
  • x86, AMD64/Intel® 64, Itanium Processor Family, System p ಹಾಗು System z ಗಾಗಿನ Red Hat Enterprise Linux 5 ಸರ್ವರ್
  • x86 ಹಾಗು AMD64/Intel® ಗಾಗಿನ Red Hat Enterprise Linux 5 ಡೆಸ್ಕ್‌ಟಾಪ್
ಬಿಡುಗಡೆ ಟಿಪ್ಪಣಿಯು Red Hat Enterprise Linux 5.4 ರಲ್ಲಿ ಅನ್ವಯಿಸಲಾದ ಸುಧಾರಣೆಗಳು ಹಾಗು ಸೇರ್ಪಡೆಗಳ ಉನ್ನತ ವ್ಯಾಪ್ತಿಯ ಬಗೆಗೆ ವಿವರಗಳನ್ನು ಒದಗಿಸುತ್ತದೆ.

ಸೂಚನೆ

Red Hat Enterprise Linux 5.4 ರಲ್ಲಿ ಬಿಡುಗಡೆ ದಸ್ತಾವೇಜಿನ ವಿನ್ಯಾಸವನ್ನು ಬದಲಾಯಿಸಲಾಗಿದೆ. ಬಿಡುಗಡೆ ಟಿಪ್ಪಣಿಯು ಈಗ ಪ್ರಮುಖ ಸವಲತ್ತುಗಳ ಅಪ್‌ಡೇಟ್‌ಗಳು, ದೋಷ ನಿವಾರಣೆಗಳು ಹಾಗು ತಂತ್ರಜ್ಞಾನ ಮುನ್ನೋಟಗಳ ಅವಲೋಕನವನ್ನು ಹೊಂದಿರುತ್ತದೆ. ಹೊಸ ತಾಂತ್ರಿಕ ಟಿಪ್ಪಣಿಗಳು ದಸ್ತಾವೇಜಿನಲ್ಲಿ ಎಲ್ಲಾ ಅಪ್‌ಡೇಟ್ ಆದ ಪ್ಯಾಕೇಜುಗಳ, ತಿಳಿದಿರುವ ಸಮಸ್ಯೆಗಳ ಹಾಗು ತಂತ್ರಜ್ಞಾಣ ಮುನ್ನೋಟಗಳ ಬಗೆಗಿನ ವಿವರಗಳನ್ನು ನೋಡಬಹುದು.

1. ವರ್ಚುವಲೈಸೇಶನ್ ಅಪ್‌ಡೇಟುಗಳು

Red Hat Enterprise Linux 5.4 ಈಗ ಹೈಪರ್ವೈಸರ್ x86_64 ಆಧರಿತವಾದ ಆರ್ಕಿಟೆಕ್ಚರುಗಳಲ್ಲಿ ಕರ್ನಲ್-ಬೇಸ್ಡ್ ವರ್ಚುವಲ್ ಮೆಶೀನ್ (KVM) ಗೆ ಬೆಂಬಲವನ್ನು ಒಳಗೊಂಡಿದೆ. KVM ಅನ್ನು ಲಿನಕ್ಸ್ ಕರ್ನಲ್‌ನಲ್ಲಿ ಸೇರ್ಪಡಿಸಲಾಗಿದ್ದು, ಇದು ಸ್ಥಿರತೆ, ಸೌಲಭ್ಯಗಳು ಹಾಗು ಯಂತ್ರಾಂಶ ಬೆಂಬಲವನ್ನು Red Hat Enterprise Linux ನಲ್ಲಿ ಅಂತರ್ಗತಗೊಳಿಸಲಾದ ವರ್ಚುವಲ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸುತ್ತದೆ. KVM ಹೈಪರ್ವೈಸರ್ ಅನ್ನು ಬಳಸಿಕೊಂಡು ಹಲವಾರು ಅತಿಥಿ ಕಾರ್ಯವ್ಯವಸ್ಥೆಗಳಿಗೆ ಬೆಂಬಲಿಸುತ್ತದೆ, ಅವುಗಳೆಂದರೆ:
  • Red Hat Enterprise Linux 3
  • Red Hat Enterprise Linux 4
  • Red Hat Enterprise Linux 5
  • Windows XP
  • Windows Server 2003
  • Windows Server 2008

ಮಹತ್ವ

Xen ಆಧರಿತವಾದ ವರ್ಚುವಲೈಸೇಶನ್ ಈಗ ಸಂಪೂರ್ಣವಾಗಿ ಬೆಂಬಲಿತವಾಗಿದೆ. ಆದರೆ, Xen-ಆಧರಿತವಾದವರ್ಚುವಲೈಸೇನ್ ಕಾರ್ಯನಿರ್ವಹಿಸಲು ಕರ್ನಲ್‌ ಬೇರೊಂದು ಆವೃತ್ತಿಯ ಅಗತ್ಯವಿರುತ್ತದೆ. KVM ಹೈಪರ್ವೈಸರ್ ಕೇವಲ ಮಾಮೂಲಿ (Xen ಅಲ್ಲದ) ಕರ್ನಲ್‌ನೊಂದಿಗೆ ಮಾತ್ರವೆ ಬಳಸಬಹುದಾಗಿದೆ.

ಎಚ್ಚರಿಕೆ

Xen ಹಾಗು KVM ಅನ್ನು ಒಂದೆ ವ್ಯವಸ್ಥೆಯಲ್ಲಿ ಅನುಸ್ಥಾಪಿಸಬಹುದಾದರೂ ಸಹ, ಅವುಗಳ ಪೂರ್ವನಿಯೋಜಿತ ಜಾಲಬಂಧ ಸಂರಚನೆಯು ವಿಭಿನ್ನವಾಗಿರುತ್ತದೆ. ಬಳಕೆದಾರರು ಒಂದು ವ್ಯವಸ್ಥೆಯಲ್ಲಿ ಕೇವಲ ಒಂದು ಹೈಪರ್ವೈಸರ್ ಅನ್ನು ಮಾತ್ರವೆ ಅನುಸ್ಥಾಪಿಸಬೇಕೆಂದು ಬಲವಾಗಿ ಸಲಹೆ ಮಾಡಲಾಗುತ್ತದೆ.

ಸೂಚನೆ

Red Hat Enterprise Linux ನೊಂದಿಗೆ ರವಾನಿಸಲಾಗುವ ಪೂರ್ವನಿಯೋಜಿತ ಹೈಪರ್ವೈಸರ್ Xen ಆಗಿರುತ್ತದೆ. ಎಲ್ಲಾ ಸಂರಚನಾ ಪೂರ್ವನಿಯೋಜಿತಗಳನ್ನು Xen ಹೈಪರ್ವೈಸರಿನೊಂದಿಗೆ ಬಳಸಲು ಸೂಕ್ತವಾಗಿರುವಂತೆ ಮಾಡಲಾಗಿರುತ್ತದೆ. ವ್ಯವಸ್ಥೆಯಲ್ಲಿ KVM ಅನ್ನು ಸಂರಚಿಸುವ ವಿವರಗಳಿಗಾಗಿ, ದಯವಿಟ್ಟು ವರ್ಚುವಲೈಸೇಶನ್(ವಾಸ್ತವೀಕರಣ) ಮಾರ್ಗದರ್ಶಿಯನ್ನು ನೋಡಿ.
KVM ಬಳಸಿಕೊಂಡು ವರ್ಚುಲೈಸ್‌ ಮಾಡುವಿಕೆಯಿಂದಾಗಿ ಅತಿಥಿ ಕಾರ್ಯವ್ಯವಸ್ಥೆಗಳ 32-ಬಿಟ್ ಹಾಗು 64-ಬಿಟ್ ಆವೃತ್ತಿಗಳನ್ನು ಮಾರ್ಪಾಡುಗಳಲ್ಲಿದೆ ಚಲಾಯಿಸುವುದನ್ನು ಅನುಮತಿಸುತ್ತದೆ. ಸುಧಾರಿತವಾದ I/O ನಿರ್ವಹಣೆಗಾಗಿ Red Hat Enterprise Linux 5.4 ನಲ್ಲಿ ಪ್ಯಾರಾವರ್ಚುಲೈಸ್ಡ್ ಡಿಸ್ಕುಗಳು ಹಾಗು ಜಾಲಬಂಧ ಸಾಧನಗಳನ್ನೂ ಸಹ ಸೇರಿಸಲಾಗಿದೆ. ಎಲ್ಲಾ libvirt ಆಧರಿತವಾದ ಉಪಕರಣಗಳನ್ನು (ಅಂದರೆ. virsh, virt-install ಹಾಗು virt-manager) KVM ಗೆ ಬೆಂಬಲ ಸೇರಿಸುವುದರ ಜೊತೆಗೆ ಅಪ್‌ಡೇಟ್ ಮಾಡಲಾಗಿದೆ.
KVM ಹೈಪರ್ವೈಸರಿನೊಂದಿಗೆ USB ಪಾಸ್‌ತ್ರೂ ಅನ್ನು 5.4 ಬಿಡುಗಡೆಯಲ್ಲಿ ತಂತ್ರಜ್ಞಾನ ಮುನ್ನೋಟವೆಂದು ಪರಿಗಣಿಸಲಾಗಿದೆ.
ಉಳಿಸು/ಮರಳಿ ಸ್ಥಾಪಿಸು(save/restore), ಲೈವ್ ವರ್ಗಾವಣೆ ಹಾಗು ಕೋರ್ ಡಂಪ್‌ಗಳಂತಹ ಹಲವಾರು ಸಮಸ್ಯೆಗಳ ಪರಿಹಾರದಿಂದಾಗಿ, x86_64 ಅತಿಥೇಯದಲ್ಲಿನ Xen ಆಧರಿತವಾದ 32 ಬಿಟ್ ಪ್ಯಾರಾವರ್ಚುಲೈಸ್ಡ್ ಅತಿಥಿಗಳು ಇನ್ನು ಮುಂದೆ ತಂತ್ರಜ್ಞಾನ ಮುನ್ನೋಟ ಎಂಬ ವರ್ಗದ ಅಡಿಯಲ್ಲಿರುವುದಿಲ್ಲ, ಹಾಗು Red Hat Enterprise Linux 5.4 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿರುತ್ತವೆ.
etherboot ಪ್ಯಾಕೇಜನ್ನು ಈ ಅಪ್‌ಡೇಟ್‌ನಲ್ಲಿ ಸೇರಿಸಲಾಗಿದೆ, ಇದು Preboot eXecution Environment (PXE) ಅನ್ನು ಬಳಸಿಕೊಂಡು ಅತಿಥಿ ವರ್ಚುವಲ್ ಗಣಕಗಳನ್ನು ಬೂಟ್‌ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ. ಈ ಪ್ರಕ್ರಿಯೆಯು OS ಲೋಡ್ ಆಗುವ ಮೊದಲೆ ನಡೆಯುತ್ತದೆ ಹಾಗು ಕೆಲವು ಸಂದರ್ಭಗಳಲ್ಲಿ OS ಗೆ ತಾನು PXE ಬೂಟ್‌ ಮಾಡಲ್ಪಟ್ಟಿದ್ದೇನೆ ಎಂದು ತಿಳಿಯುವುದೆ ಇಲ್ಲ. etherboot ಗೆ ಬೆಂಬಲ ನೀಡಿಕೆಯು ಕೇವಲ KVM ನೊಂದಿಗಿನ ಬಳಕೆಗೆ ಮಾತ್ರ ಸೀಮಿತಗೊಳಿಸಲಾಗಿದೆ.
qemu-kvm ಆಧರಿತವಾದ ವರ್ಚುವಲ್ ಗಣಕಗಳಲ್ಲಿನ ಸ್ಪೈಸ್ ಪ್ರೊಟೊಕಾಲ್‌ಗೆ ಬೆಂಬಲ ನೀಡುವ ಸಲುವಾಗಿ qspice ಪ್ಯಾಕೇಜುಗಳನ್ನು Red Hat Enterprise Linux 5.4 ರಲ್ಲಿ ಸೇರಿಸಲಾಗಿದೆ. ಕ್ಲೈಟ್, ಪರಿಚಾರಕ ಹಾಗು ಜಾಲ ವೀಕ್ಷಕ ಪ್ಲಗ್‌ಇನ್‌ ಘಟಕಗಳನ್ನು qspice ಹೊಂದಿದೆ. ಆದರೆ, ಕೇವಲ qspice-libs package ನಲ್ಲಿನ qspice ಪರಿಚಾರಕವು ಮಾತ್ರ ಸಂಪೂರ್ಣವಾಗಿ ಬೆಂಬಲಿತವಾಗಿದೆ. qspice ಕ್ಲೈಂಟ್‌ (qspice ಪ್ಯಾಕೇಜಿನಿಂದ ಒದಗಿಸಲಾಗಿದ್ದು) ಹಾಗು qspice ಮೋಝಿಲ್ಲಾ ಪ್ಲಗ್‌ಇನ್ (qspice-mozilla ಪ್ಯಾಕೇಜಿನಿಂದ ಒದಗಿಸಲಾಗಿದ್ದು) ಎರಡನ್ನೂ ತಂತ್ರಜ್ಞಾನ ಮುನ್ನೋಟಗಳಾಗಿ ಸೇರ್ಪಡಿಸಲಾಗಿದೆ. qspice-libs ಪ್ಯಾಕೇಜು qemu-kvm ನೊಂದಿಗೆ ಬಳಸಲಾಗುವ ಪರಿಚಾರಕ ಅನ್ವಯಿಸುವಿಕೆಯನ್ನು ಹೊಂದಿದೆ ಹಾಗು ಇದು ಸಂಪೂರ್ಣವಾಗಿ ಬೆಂಬಲಿತವಾಗಿದೆ. ಆದರೆ, Red Hat Enterprise Linux 5.4 ರಲ್ಲಿ ಸ್ಪೈಸ್‌ ಪ್ರೊಟೊಕಾಲ್‌ಗೆ libvirt ಬೆಂಬಲವಿರುವುದಿಲ್ಲ; Red Hat Enterprise Linux 5.4 ರಲ್ಲಿ spice ಗೆ ಇರುವ ಏಕೈಕ ಬೆಂಬಲವೆಂದರೆ Red Hat Enterprise Virtualization ಉತ್ಪನ್ನದ ಮೂಲಕ ಅದನ್ನು ಬಳಸುವುದು.

2. ಕ್ಲಸ್ಟರಿಂಗ್ ಅಪ್‌ಡೇಟ್‌ಗಳು

ಕ್ಲಸ್ಟರುಗಳು ಅನೇಕ ಗಣಕಗಳ (ನೋಡ್‌ಗಳ) ಜೋಡಣೆಯಾಗಿದ್ದು, ವಿಶ್ವಾಸಾರ್ಹತೆ, ಸ್ಕೇಲೆಬಿಲಿಟಿ, ಹಾಗು ಸಂದಿಗ್ಧ ಸಮಯದಲ್ಲಿ ಉತ್ಪಾದನಾ ಸೇವೆಗಳ ಲಭ್ಯತೆಯ ಉದ್ದೇಶದಿಂದ ಕೆಲಸ ಮಾಡುತ್ತವೆ.
Red Hat Enterprise Linux 5.4 ರಲ್ಲಿ ಮಾಡಲಾಗಿರುವ ಕ್ಲಸ್ಟರಿಂಗ್‌ನ ಎಲ್ಲಾ ಅಪ್‌ಡೇಟ್‌ಗಳನ್ನು ತಾಂತ್ರಿಕ ಟಿಪ್ಪಣಿಗಳಲ್ಲಿ ವಿವರಿಸಲಾಗಿದೆ. Red Hat Enterprise Linux ನ ಕ್ಲಸ್ಟರಿಂಗ್‌ ಬಗೆಗಿನ ಹೆಚ್ಚಿನ ಮಾಹಿತಿಯು ಕ್ಲಸ್ಟರ್ ಸೂಟ್ ಅವಲೋಕನ ಹಾಗು ಕ್ಲಸ್ಟರ್ ನಿರ್ವಹಣೆ ದಸ್ತಾವೇಜುಗಳಲ್ಲಿ ಲಭ್ಯವಿದೆ.
ಸ್ವಯಂಚಾಲಿತ ಹೈಪರ್ವೈಸರ್ ಅನ್ನು ಪತ್ತೆಹಚ್ಚುವುದನ್ನು ಬೆಂಬಲಿಸುವಂತೆ ಕ್ಲಸ್ಟರ್ ಸೂಟ್ ಉಪಕರಣಗಳನ್ನು ನವೀಕರಿಸಲಾಗಿದೆ. ಆದರೆ, ಕ್ಲಸ್ಟರ್ ಸೂಟ್ ಅನ್ನು KVM ಹೈಪರ್ವೈಸರಿನೊಂದಿಗೆ ಚಲಾಯಿಸುವುದು ಒಂದು ತಂತ್ರಜ್ಞಾನ ಮುನ್ನೋಟ ಎಂದು ಪರಿಗಣಿಸಲಾಗುತ್ತದೆ.
OpenAIS ಈಗ ಮಲ್ಟಿಕ್ಯಾಸ್ಟಿನ ಜೊತೆಗೆ ಬ್ರಾಡ್‌ಕ್ಯಾಸ್ಟ್ ಜಾಲಬಂಧ ಸಂವಹನವನ್ನು ಸಹ ನೀಡುತ್ತದೆ. ಈ ಸವಲತ್ತನ್ನು OpenAIS ನ ಸ್ಟಾಂಡ್‌ಅಲೋನ್ ಹಾಗು ಕ್ಲಸ್ಟರ್ ಸೂಟ್‌ನೊಂದಿಗೆ ಬಳಸುವುದು ತಂತ್ರಜ್ಞಾನ ಮುನ್ನೋಟವಾಗಿರುತ್ತದೆ. ಆದರೆ, ಬ್ರಾಡ್‌ಕಾಸ್ಟ್ ಅನ್ನು ಬಳಸುವಂತೆ OpenAIS ಅನ್ನು ಸಂರಚಿಸುವಿಕೆಯನ್ನು ಕ್ಲಸ್ಟರ್ ನಿರ್ವಹಣಾ ಉಪಕರಣಗಳಲ್ಲಿ ಸೇರಿಸಿಲಾಗಿಲ್ಲ ಹಾಗು ಅದನ್ನು ನೀವು ಕೈಯಾರೆ ಸಂರಚಿಸಬೇಕಾಗುತ್ತದೆ ಎನ್ನುವುದನ್ನು ನೆನಪಿಡಿ.

ಸೂಚನೆ

SELinux ಅನ್ನು ಒತ್ತಾಯಪೂರ್ವಕ ಕ್ರಮದಲ್ಲಿ ಕ್ಲಸ್ಟರ್ ಸೂಟ್‌ ಅನ್ನು ಬಳಸಲು ಬೆಂಬಲವಿಲ್ಲ; ಅನುಮತಿಪೂರ್ವಕ ಅಥವ ಅಶಕ್ತಗೊಂಡ ಕ್ರಮವನ್ನು ಬಳಸಬೇಕಾಗುತ್ತದೆ. ಬೇರ್ ಮೆಟಲ್ PPC ವ್ಯವಸ್ಥೆಗಳಲ್ಲಿ ಕ್ಲಸ್ಟರ್ ಸೂಟ್‌ ಅನ್ನು ಬಳಸುವುಕ್ಕೆ ಬೆಂಬಲವಿರುವುದಿಲ್ಲ. VMWare ESX ಅತಿಥೇಯಗಳ ಮೇಲೆ ಕ್ಲಸ್ಟರ್ ಸೂಟ್‌ಗಳನ್ನು ಚಲಾಯಿಸುವುದು ಹಾಗು fence_vmware ಅನ್ನು ಬಳಸುವುದು ತಂತ್ರಾಜ್ಞಾನ ಮುನ್ನೋಟ ಎಂದು ಪರಿಗಣಿಸಲಾಗುವುದು. VMWare ESX ಅತಿಥೇಯಗಳಲ್ಲಿನ ಅತಿಥಿಗಳಲ್ಲಿ ವರ್ಚುವಲ್ ಸೆಂಟರಿನಿಂದ ನಿರ್ವಹಿತಗೊಂಡು ಚಲಾಯಿಸಲಾಗುವ ಕ್ಲಸ್ಟರ್ ಸೂಟ್‌ಗೆ ಬೆಂಬಲವಿರುವುದಿಲ್ಲ.
ಮಿಶ್ರಿತ ಆರ್ಕಿಟೆಕ್ಚರ್ ಕ್ಲಸ್ಟರುಗಳು ಕ್ಲಸ್ಟರ್ ಸೂಟ್ ಅನ್ನು ಬಳಸುವುದಕ್ಕೆ ಬೆಂಬಲವಿರುವುದಿಲ್ಲ. ಕ್ಲಸ್ಟರಿನಲ್ಲಿನ ಎಲ್ಲಾ ನೋಡ್‌ಗಳು ಒಂದೇ ಬಗೆಯ ಆರ್ಕಿಟೆಕ್ಚರುಗಳಾಗಿರಬೇಕು. ಕ್ಲಸ್ಟರ್ ಸೂಟ್‌ ಉದ್ದೇಶಕ್ಕಾಗಿ, x86_64, x86 ಹಾಗು ia64 ಅನ್ನು ಒಂದೇ ಬಗೆಯ ಆರ್ಕಿಟೆಕ್ಚರುಗಳೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ಆರ್ಕಿಟೆಕ್ಚರುಗಳಲ್ಲಿ ಯಾವುದೆ ಸಂಯೋಜನೆಯೊಂದಿಗೆ ಕ್ಲಸ್ಟರ್ ಅನ್ನು ಚಲಾಯಿಸುವುದಕ್ಕೆ ಬೆಂಬಲವಿರುತ್ತದೆ.

2.1. ಫೆನ್ಸಿಂಗ್ ಸುಧಾರಣೆಗಳು

ಫೆನ್ಸಿಂಗ್ ಎನ್ನುವುದು ಒಂದು ನೋಡ್ ಅನ್ನು ಕ್ಲಸ್ಟರಿನ ಹಂಚಿಕಾ ಶೇಖರಣೆಯಿಂದ ಸಂಪರ್ಕ ಕಡಿದು ಹಾಕುವುದಾಗಿದೆ. ಹಂಚಲಾದ ಶೇಖರಣೆಯಿಂದ I/O ಅನ್ನು ಫೆನ್ಸಿಂಗ್ ಕಡಿದು ಹಾಕುವ ಮೂಲಕ ದತ್ತಾಂಶದ ಸಮಗ್ರತೆಯನ್ನು ಕಾಪಾಡುತ್ತದೆ.
Red Hat Enterprise Linux 5.4 ರಲ್ಲಿ, Power Systems ನಲ್ಲಿ ಹಾರ್ಡ್-ವೇರ್ ಮ್ಯಾನೇಜ್‌ಮೆಂಟ್ ಕನ್ಸೋಲ್‌ (HMC) ಅನ್ನು ಬಳಸಿಕೊಂಡು ನಿರ್ವಹಿಲ್ಪಡುವ IBM Logical Partition (LPAR) ಇನ್‌ಸ್ಟೆನ್ಸುಗಳಿಗಾಗಿ ಫೆನ್ಸಿಂಗ್ ಬೆಂಬಲವನ್ನು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ (BZ#485700). Cisco MDS 9124 ಹಾಗು Cisco MDS 9134 ಮಲ್ಟಿಲೇಯರ್ ಫ್ಯಾಬ್ರಿಕ್ ಸ್ವಿಚಸ್‌ಗೆ ಫೆನ್ಸಿಂಗ್ ಬೆಂಬಲವನ್ನು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ (BZ#480836).
Red Hat Enterprise Linux ನ ಈ ಬಿಡುಗಡೆಯಲ್ಲಿ fence_virsh ಫೆನ್ಸ್ ಮಧ್ಯವರ್ತಿಯನ್ನುತಂತ್ರಜ್ಞಾನ ಮುನ್ನೋಟವಾಗಿ ಒದಗಿಸಲಾಗಿದೆ. fence_virsh ಯು libvirt ಪ್ರೊಟೊಕಾಲ್ ಅನ್ನು ಬಳಸಿಕೊಂಡು ಒಂದು ಅತಿಥಿಯು (domU ಆಗಿ ಚಲಾಯಿತಗೊಳ್ಳುತ್ತಿರುವ) ಇನ್ನೊಂದು ಅತಿಥಿಗೆ ಫೆನ್ಸ್ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ, fence_virsh ಅನ್ನು ಕ್ಲಸ್ಟರ್ ಸೂಟ್‌ನೊಂದಿಗೆ ಸೇರಿಸದೆ ಇರುವ ಕಾರಣ ಆ ಪರಿಸರದಲ್ಲಿ ಫೆನ್ಸ್ ಮಧ್ಯವರ್ತಿಯನ್ನು ಬಳಸುವುದಕ್ಕೆ ಬೆಂಬಲವಿರುವುದಿಲ್ಲ.
ಹೆಚ್ಚುವರಿಯಾಗಿ, ಈ ಕೆಳಗಿನ ಫೆನ್ಸಿಂಗ್ ಬಗೆಗಿನ ಲೇಖನಗಳನ್ನು Red Hat Knowledge Base ನಲ್ಲಿ ಮುದ್ರಿಸಲಾಗಿದೆ:
  • Red Hat Enterprise Linux 5 ಅಡ್ವಾನ್ಸಡ್ ಪ್ಲಾಟ್‌ಫಾರ್ಮ್ ಕ್ಲಸ್ಟರ್ ಸೂಟ್‌ನೊಂದಿಗೆ SCSI ಫೆನ್ಸಿಂಗ್ (ಪರ್ಸಿಸ್ಟೆಂಟ್ ರಿಸರ್ವೇಶನ್ಸ್): http://kbase.redhat.com/faq/docs/DOC-17784
  • Red Hat Enterprise Linux 5 ಅಡ್ವಾನ್ ಕ್ಲಸ್ಟರ್ ಸೂಟ್‌ನೊಂದಿಗೆ fence_vmware ಅನ್ನು ಬಳಸುವುದು: http://kbase.redhat.com/faq/docs/DOC-17345

3. ಜಾಲಬಂಧ ಅಪ್‌ಡೇಟ್‌ಗಳು

ಈ ಅಪ್‌ಡೇಟ್‌ನೊಂದಿಗೆ, ಜನೆರಿಕ್ ರಿಸೀವ್ ಆಫ್‌ಲೋಡ್ (GRO) ಬೆಂಬಲವನ್ನು ಕರ್ನಲ್ ಹಾಗು ಬಳಕೆದಾರ ಸ್ಥಳ(ಯೂಸರ್ ಸ್ಪೇಸ್), ethtool ಎರಡಕ್ಕೂ ಅನ್ವಯಿಸಲಾಗಿದೆ.((BZ#499347)) GRO ವ್ಯವಸ್ಥೆಯು Central Processing Unit (CPU) ಇಂದ ನಡೆಯುವ ಪ್ರಕ್ರಿಯೆಗಳನ್ನು ಕಡಿಮೆ ಮಾಡುವ ಮೂಲಕ ಒಳಬರುವ ಜಾಲಬಂಧ ಸಂಪರ್ಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. GRO ಯು ಲಾರ್ಜ್ ರಿಸೀವ್ ಆಫ್‌ಲೋಡ್ (LRO) ವ್ಯವಸ್ಥೆಯಂತಹುದೆ ಆದ ವ್ಯವಸ್ಥೆಯನ್ನು ಅನ್ವಯಿಸುತ್ತದೆಯಾದರೂ ಸಹ ಇದನ್ನು ವರ್ಗಾವಣೆ ಪದರ ಪ್ರೊಟೊಕಾಲ್‌ಗಳ ದೊಡ್ಡ ವ್ಯಾಪ್ತಿಗೆ ಅನ್ವಯಿಸಬಹುದು. Intel® Gigabit ಇತರ್ನೆಟ್ ಅಡಾಪ್ಟರುಗಳ igb ಚಾಲಕ Intel 10 Gigabit PCI ಎಕ್ಸ್‌ಪ್ರೆಸ್ ಜಾಲಬಂಧ ಚಾಲಕಗಳಿಗಾಗಿನ ixgbe ಅನ್ನೂ ಒಳಗೊಂಡಂತೆ ಇನ್ನೂ ಕೆಲವು ಜಾಲಬಂಧ ಸಾಧನ ಚಾಲಕಗಳಿಗೂ ಸಹ GRO ಬೆಂಬಲವನ್ನು ಸೇರಿಸಲಾಗಿದೆ.
ನೆಟ್‌ಫಿಲ್ಟರ್ ಫ್ರೇಮ್‌ವರ್ಕ್ (ಜಾಲಬಂಧ ಪ್ಯಾಕೆಟ್‌ ಶೋಧನೆಗೆ ನೆರವಾಗುವ ಕರ್ನಲ್‌ನ ಭಾಗ) ಅನ್ನು ಡಿಫರೆನ್ಶಿಯೇಟೆಡ್ ಸರ್ವಿಸಸ್ ಕೋಡ್ ಪಾಯಿಂಟ್ (DSCP) ಮೌಲ್ಯಗಳನ್ನು ಬೆಂಬಲಿಸುವಂತೆ ಅಪ್‌ಡೇಟ್ ಮಾಡಲಾಗಿದೆ
bind (ಬರ್ಕ್ಲೆ ಇಂಟರ್ನೆಟ್ ನೇಮ್ ಡೊಮೈನ್) ಪ್ಯಾಕೇಜ್ DNS (ಡೊಮೈನ್ ನೇನ್ ಸಿಸ್ಟಂ) ಪ್ರೊಟೊಕಾಲ್‌ಗಳನ್ನು ಅನ್ವಯಿಸುವಿಕೆಯನ್ನು ಒದಗಿಸುತ್ತದೆ. bind ಈ ಹಿಂದೆ, ಮನವಿಗಳಿಗೆ ವಿಶ್ವಾಸಾರ್ಹವಾದ ಹಾಗು ವಿಶ್ವಾಸಾರ್ಹವಲ್ಲದ ಪ್ರತ್ಯುತ್ತರಗಳ ಬಂದಾಗ ಅವುಗಳ ನಡುವೆ ವ್ಯತ್ಯಾಸವನ್ನು ಅರಿಯಲು ಯಾವುದೆ ವ್ಯವಸ್ಥೆಯನ್ನು ಒದಗಿಸುತ್ತಿರಲಿಲ್ಲ. ಇದರ ಪರಿಣಾಮವಾಗಿ, ಸಮರ್ಪಕವಾಗಿ ಸಂರಚಿವಾಗಿರದ ಒಂದು ಪರಿಚಾರಕವು ಮನವಿಗಳಿಗೆ ಪ್ರತ್ಯುತ್ತರಿಸಿದಾಗ ಅದನ್ನು ನಿರಾಕರಿಸಲಾಗುತ್ತಿತ್ತು. ಈ ಅಪ್‌ಡೇಟ್‌ನಿಂದಾಗಿ, ಒಂದು ಪರಿಚಾರಕದಲ್ಲಿನ ವಿಶ್ವಾಸಾರ್ಹವಲ್ಲದ ದತ್ತಾಂಶವನ್ನು ನಿಲುಕಿಸಿಕೊಳ್ಳುವುದನ್ನು ನಿಯಂತ್ರಿಸುವ ಸಲುವಾಗಿ bind allow-query-cache ಅನ್ನು ಒದಗಿಸುತ್ತದೆ (ಉದಾಹರಣೆಗೆ: ಕ್ಯಾಶ್ ಮಾಡಲಾದ ಪುನರಾವರ್ತಿತ ಫಲಿತಾಂಶಗಳು ಹಾಗು ರೂಟ್ ವಲಯ ಭೇಟಿಗಳು). (BZ#483708)

4. ಕಡತವ್ಯವಸ್ಥೆ ಅಪ್‌ಡೇಟ್‌ಗಳು

5.4 ಅಪ್‌ಡೇಟ್‌ನಲ್ಲಿ, ಕಡತ ವ್ಯವಸ್ಥೆ ಬೆಂಬಲಕ್ಕಾಗಿ ಹಲವಾರು ಪ್ರಮುಖ ಬದಲಾವಣೆಗಳನ್ನು ಸೇರಿಸಲಾಗಿದೆ. ಮೂಲ Red Hat Enterprise Linux ಈಗ Filesystem in Userspace (FUSE) ಕರ್ನಲ್ ಘಟಕ ಹಾಗು ಬಳಕೆದಾರ ಸ್ಥಳದ(ಯೂಸರ್ ಸ್ಪೇಸ್) ಸೌಕರ್ಯವನ್ನು ಹೊಂದಿರಲಿದ್ದು, ಇದರಿಂದಾಗಿ ಬಳಕೆದಾರರು ತಮ್ಮದೆ ಆದ FUSE ಕಡತ ವ್ಯವಸ್ಥೆಗಳನ್ನು ಮಾರ್ಪಾಡು ಮಾಡದೆ ಇರುವ Red Hat Enterprise Linux ಕರ್ನಲ್‌ ಮೇಲೆ ಚಲಾಯಿಸಬಹುದಾಗಿರುತ್ತದೆ(BZ#457975). ಕರ್ನಲ್‌ಗೆ XFS ಕಡತ ವ್ಯವಸ್ಥೆ ಬೆಂಬಲವನ್ನು ತಂತ್ರಜ್ಞಾನ ಮುನ್ನೊಟವಾಗಿ ಸೇರಿಸಲಾಗಿದೆ (BZ#470845). FIEMAP ಇನ್‌ಪುಟ್/ಔಟ್‌ಪುಟ್ ಕಂಟ್ರೋಲ್ (ioctl) ಸಂಪರ್ಕಸಾಧನವನ್ನು ಅನ್ವಯಿಸಲಾಗಿದ್ದು ಇದರಿಂದಾಗಿ ಕಡತಗಳ ಭೌತಿಕ ವಿನ್ಯಾಸವನ್ನು ಪರಿಣಾಮಕಾರಿಯಾಗಿ ಮ್ಯಾಪ್‌ ಮಾಡಬಹುದಾಗಿದೆ. FIEMAP ioctl ಅನ್ನು ಒಂದು ನಿಶ್ಚಿತ ಕಡತದ ಫ್ರಾಗ್ಮೆಂಟೇಶನ್ ಅನ್ನು ಪರಿಶೀಲಿಸಲು ಅಥವ ವಿರಳವಾಗಿ ನಿಯೋಜಿತವಾದ ಕಡತದ ಒಂದು ಸೂಕ್ತವಾದ ಪ್ರತಿಯನ್ನು ನಿರ್ಮಿಸಲು ಅನ್ವಯಗಳಿಂದ ಬಳಸಬಹುದಾಗಿದೆ(BZ#296951).
ಹೆಚ್ಚುವರಿಯಾಗಿ, ಕಾಮನ್ ಇಂಟರ್ನೆಟ್ ಫೈಲ್‌ (CIFS) ಅನ್ನು ಕರ್ನಲ್‌ನಲ್ಲಿ ಅಪ್‌ಡೇಟ್ ಮಾಡಲಾಗಿದೆ (BZ#465143). ext4 ಕಡತ ವ್ಯವಸ್ಥೆಯನ್ನೂ (Red Hat Enterprise Linux ನಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿತ್ತು) ಸಹ ಅಪ್‌ಡೇಟ್ ಮಾಡಲಾಗಿದೆ (BZ#485315).
Red Hat Enterprise Linux 5.4 ನಲ್ಲಿ, ಗ್ಲೋಬಲ್ ಫೈಲ್ ಸಿಸ್ಟಂ 2 (GFS2) ಅನ್ನು ಏಕಮೇವ ಪರಿಚಾರಕ ಕಡತ ವ್ಯವಸ್ಥೆಯಾಗಿ (ಅಂದರೆ, ಕ್ಲಸ್ಟರ್ ಪರಿಸರದಲ್ಲಿ ಅಲ್ಲ) ಬಳಸುವುದನ್ನು ತೆಗೆದು ಹಾಕಲಾಗಿದೆ. ಹೆಚ್ಚಿನ ಕ್ಲಸ್ಟರಿಂಗ್ ಲಭ್ಯತೆಯ ಅಗತ್ಯವಿರದ GFS2 ಅನ್ನು ಬಳಸುವ ಬಳಕೆದಾರರು ext3 ಅಥವ xfs ಗೆ ವಲಸೆ ಹೋಗಲು ಸಲಹೆ ಮಾಡಲಾಗುತ್ತದೆ. xfs ಕಡತ ವ್ಯವಸ್ಥೆಯು ಅತಿ ದೊಡ್ಡದಾದ ಕಡತ ವ್ಯವಸ್ಥೆಗಾಗಿ (16 TB ಹಾಗು ಹೆಚ್ಚಿನ) ಬಳಸಲಾಗುತ್ತದೆ. ಈಗಿರುವ ಬಳಕೆದಾರರಿಗೆ ಬೆಂಬಲ ನೀಡಿಕೆಯನ್ನು ಮುಂದುವರೆಸಲಾಗುತ್ತದೆ.
ಅಗತ್ಯವಿರುವ ಶಬ್ಧಸೂಚಕಗಳು, stat, write, stat ಅನ್ನು ಪೂರ್ಣಗೊಳಿಸುವಂತಹ ಪ್ರಕ್ರಿಯೆಗಳು ಎರಡನೆ ಬಾರಿ ಕಡತದ ಮೇಲೆ ಮಾಡಲಾದ stat ಕರೆಯ ಫಲಿತಾಂಶಕ್ಕಿಂತ ಮೊದಲ ಬಾರಿ ಮಾಡಲಾದ stat ಕರೆಯ ಫಲಿತಾಂಶದಲ್ಲಿನ mtime ಭಿನ್ನವಾದ mtime (ಕೊನೆಯ ಬಾರಿ ಮಾರ್ಪಡಿಸಲಾದ ಸಮಯ) ಅನ್ನು ನೀಡಬೇಕು ಎಂದು ಸೂಚಿಸುತ್ತವೆ. NFS ನಲ್ಲಿ ಕಡತ ಸಮಯಗಳನ್ನು ಕಟ್ಟುನಿಟ್ಟಾಗಿ ಪರಿಚಾರಕದಿಂದ ನಿರ್ವಹಿಸಲಾಗುತ್ತದೆ, ಇದರಿಂದಾಗಿ WRITE NFS ಪ್ರೊಟೊಕಾಲ್ ಕಾರ್ಯಾದ ಮೂಲಕ ದತ್ತಾಂಶವು ಪರಿಚಾರಕಕ್ಕೆ ರವಾನಿಸದ ಹೊರತು ಕಡತದ mtime ಅಪ್‌ಡೇಟ್ ಆಗುವುದಿಲ್ಲ. ಕೇವಲ ಪುಟದ ಕ್ಯಾಶೆಯಿಂದ ದತ್ತಾಂಶವನ್ನು ನಕಲಿಸುವುದರಿಂದ mtime ಅಪ್‌ಡೇಟ್ ಆಗುವುದಿಲ್ಲ. ಕೇವಲ ಈ ವಿಷಯದಲ್ಲಿ ಮಾತ್ರ NFS ಸ್ಥಳೀಯ ಕಡತ ವ್ಯವಸ್ಥೆಗಿಂತ ವಿಭಿನ್ನವಾಗಿರುತ್ತದೆ. ಆದ್ದರಿಂದ,ಅತ್ಯಂತ ಹೆಚ್ಚಿನ ಕೆಲಸ ಹೊರೆಯಲ್ಲಿರುವ ಒಂದು NFS ಕಡತವ್ಯವಸ್ಥೆಯು stat ಕರೆಗಳಿಗೆ ಅತ್ಯಂತ ಹೆಚ್ಚಿನ ಲೇಟೆನ್ಸಿಗೆ ಕಾರಣವಾಗಬಹುದು.(BZ#469848)
ext4 ಕಡತವ್ಯವಸ್ಥೆಯ ತಂತ್ರಜ್ಞಾನ ಮುನ್ನೋಟವನ್ನು ಅಪ್‌ಡೇಟ್‌ ಆದ ಬಳಕೆದಾರಸ್ಥಳ(ಯೂಸರ್ ಸ್ಪೇಸ್) ಉಪಕರಣಗಳೊಂದಿಗೆ ಪುನಶ್ಚೇತನಗೊಳಿಸಲಾಗಿದೆ. Ext4 ಯು ext3 ಕಡತ ವ್ಯವಸ್ಥೆಯ ಒಂದು ಹಂತ ಹೆಚ್ಚಿನ ಸುಧಾರಣೆಯಾಗಿದ್ದು Red Hat ಹಾಗು the ಲಿನಕ್ಸ್ ಸಮುದಾಯದಿಂದ ವಿಕಸಿಸಲ್ಪಟ್ಟಿದೆ.

ಸೂಚನೆ

ಈ ಹಿಂದಿನ Red Hat Enterprise Linux ನಲ್ಲಿ ext4 ತಂತ್ರಜ್ಞಾನ ಮುನ್ನೋಟವನ್ನು ಬಳಸಿಕೊಳ್ಳಲಾಗುತ್ತಿತ್ತು ಹಾಗು ext4 ಕಡತ ವ್ಯವಸ್ಥೆಗಳನ್ನು ext4dev ಎಂದು ಹೆಸರಿಸಲಾಗಿತ್ತು. ಈ ಅಪ್‌ಡೇಟ್‌ನೊಂದಿಗೆ, ext4 ಕಡತವ್ಯವಸ್ಥೆಗಳನ್ನು ext4 ಎಂದೆ ಕರೆಯಲಾಗುತ್ತದೆ.
samba3x ಹಾಗು ctdb ಅನ್ನು x86_64 ಪ್ಲಾಟ್‌ಫಾರ್ಮಿನಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. Samba3x ಪ್ಯಾಕೇಜ್ Samba 3.3 ಅನ್ನು ಹಾಗು ctdb ಯು ಕ್ಲಸ್ಟರ್ಡ್ TDB ಬ್ಯಾಕ್‌ಎಂಡ್ ಅನ್ನು ಒದಗಿಸುತ್ತದೆ. samba3x ಹಾಗು ctdb ಅನ್ನು GFS ಕಡತವ್ಯವಸ್ಥೆಯೊಂದಿಗೆ ಕ್ಲಸ್ಟರ್ ನೋಡ್‌ಗಳೊಂದಿಗೆ ಚಲಾಯಿಸಿದಾಗ ಅದು ಕ್ಲಸ್ಟರ್ ಆದಂತಹ CIFS ಕಡತವ್ಯವಸ್ಥೆಯನ್ನು ರಫ್ತು ಮಾಡುವುದನ್ನು ಅನುಮತಿಸುತ್ತದೆ. ಈ ಘಟಕಗಳನ್ನು ಒಂದು ಪರ್ಯಾಯ ಉಪ ಚಾನಲ್‌ನಲ್ಲಿ ಒದಗಿಸಲಾಗುತ್ತದೆ ಏಕೆಂದರೆ ಅವು ಕ್ಲೈಂಟ್‌ ಹಾಗು ಪರಿಚಾರಕದ ಗುಂಪುಗಳಲ್ಲಿನ ಸಾಂಬಾ ಪ್ಯಾಕೇಜಿನಿಂದ ಅನುಸ್ಥಾಪಿಸಲಾದ ಕಡತಗಳೊಂದಿಗೆ ಘರ್ಷಿಸಿಲ್ಪಡುತ್ತದೆ

5. ಗಣಕತೆರೆ ಅಪ್‌ಡೇಟ್‌ಗಳು

5.1. ಅಡ್ವಾನ್ಸಡ್ ಲಿನಕ್ಸ್ ಧ್ವನಿ ಆರ್ಕಿಟೆಕ್ಚರ್(ALSA)

Red Hat Enterprise Linux 5.4 ರಲ್ಲಿ, ಸುಧಾರಿತ ಲಿನಕ್ಸ್ ಧ್ವನಿ ಆರ್ಕಿಟೆಕ್ಚರ್(ALSA) ಅನ್ನು ಅಪ್‌ಡೇಟ್ ಮಾಡಲಾಗಿದೆ — ಇದು ಹೈ ಡೆಫಿನೇಶನ್ ಆಡಿಯೊಗೆ (HDA) ಹೆಚ್ಚಿನ ಬೆಂಬಲವನ್ನು ಒದಗಿಸುತ್ತದೆ.

5.2. ಗ್ರಾಫಿಕ್ಸ್ ಚಾಲಕಗಳು

ATI ವೀಡಿಯೊ ಸಾಧನಗಳಿಗಾಗಿನ ati ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
Intel ಇಂಟಿಗ್ರೇಟ್ ಮಾಡಲಾದ ಪ್ರದರ್ಶಕ ಸಾಧನಗಳಿಗಾಗಿನ i810 ಹಾಗು intel ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದೆ.
Matrox ವೀಡಿಯೊ ಸಾಧನಗಳಿಗಾಗಿನ mga ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
nVidia ವೀಡಿಯೊ ಸಾಧನಗಳಿಗಾಗಿನ nv ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.

5.3. ಲ್ಯಾಪ್‌ಟಾಪ್ ಬೆಂಬಲ

ಈ ಮೊದಲು, ಒಳನಿರ್ಮಿತ CD/DVD ಡ್ರೈವ್‌ಗಳನ್ನು ಹೊಂದಿರುವ ಕೆಲವು ಲ್ಯಾಪ್‌ಟಾಪ್‌ಗಳನ್ನು ಡಾಕಿಂಗ್ ಸ್ಟೇಶನ್‌ಗಳೊಂದಿಗೆ ಡಾಕಿಂಗ್ ಅಥವ ಅನ್‌ಡಾಕಿಂಗ್ ಮಾಡಿದಾಗ, ಡ್ರೈವ್ ಅನ್ನು ಗುರುತಿಸಲಾಗುತ್ತಿರಲಿಲ್ಲ. ಡ್ರೈವ್ ಅನ್ನು ಪುನಃ ನಿಲುಕಿಸಿಕೊಳ್ಳುವ ಸಲುವಾಗಿ ಗಣಕವನ್ನು ಮರಳಿ ಬೂಟ್ ಮಾಡಬೇಕಾಗುತ್ತಿತ್ತು. ಈ ಅಪ್‌ಡೇಟ್‌ನಲ್ಲಿ, ಕರ್ನಲ್‌ನಲ್ಲಿ ACPI ಡಾಕಿಂಗ್ ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದ್ದು, ಇದು ಈ ಸಮಸ್ಯೆಯನ್ನು ಪರಿಹರಿಸುತ್ತದೆ. (BZ#485181).

6. ಉಪಕರಣಗಳ ಅಪ್‌ಡೇಟ್‌ಗಳು

  • SystemTap ಈಗ ಸಂಪೂರ್ಣವಾಗಿ ಬೆಂಬಲಿತವಾಗಿದ್ದು, ಅದನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‌ಡೇಟ್‌ ಸುಧಾರಿತ ಬಳಕೆದಾರ-ಸ್ಥಳ (ಯೂಸರ್-ಸ್ಪೇಸ್), ಪ್ರಾಯೋಗಿಕ DWARF ಅನ್‌ವೈಂಡಿಂಗ್, ಹಾಗು dtrace-ಸಹವರ್ತನೀಯ ಮಾರ್ಕರುಗಳನ್ನು ಒದಗಿಸುವ ಹೊಸತಾದ <sys/sdt.h> ಹೆಡರ್ ಕಡತವನ್ನು ಹೊಂದಿದೆ.
    ಈ ಮರು-ಬೇಸ್ debuginfo-less ಕಾರ್ಯಗಳಿಗೆ ಬೆಂಬಲವನ್ನು ಹೆಚ್ಚಿಸುತ್ತದೆ. ಟೈಪ್‌ಕ್ಯಾಸ್ಟಿಂಗ್ (@cast ಆಪರೇಟರ್ ಮೂಲಕ) ಈಗ ಕರ್ನಲ್ ಟ್ರೇಸ್‌ಪಾಯಿಂಟ್‌ ತನಿಖೆಯೊಂದಿಗೆ ಬೆಂಬಲಿತವಾಗಿದೆ. debuginfo-less ಕಾರ್ಯಗಳಿಗೆ ತೊಂದರೆ ಮಾಡುತ್ತಿದ್ದಂತಹ ಹಲವಾರು 'kprobe.*'ದೋಷಗಳನ್ನು ಸರಿಪಡಿಸಲಾಗಿದೆ.
    SystemTap ದಸ್ತಾವೇಜಿನಲ್ಲಿ ಹಲವಾರು ಸುಧಾರಣೆಗಳನ್ನು ಮಾಡಲಾಗಿದೆ. ಒಂದು ಹೊಸ '3stap' ಸವಲತ್ತು ಹೆಚ್ಚಿನ SystemTap ತನಿಖೆಗಳು ಹಾಗು ಕಾರ್ಯಗಳ ಬಗೆಗಿನ ಉಪಯುಕ್ತ ಮ್ಯಾನ್‌ ಪುಟಗಳನ್ನು ಒದಗಿಸುತ್ತದೆ. systemtap-testsuite ಪ್ಯಾಕೇಜ್ ನಮೂನೆ ಸ್ಕ್ರಿಪ್ಟುಗಳ ದೊಡ್ಡ ಲೈಬ್ರರಿಯನ್ನು ಹೊಂದಿದೆ.
    SystemTap ಮರು-ಬೇಸ್‌ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ತಂತ್ರಜ್ಞಾನ ಟಿಪ್ಪಣಿಗಳಲ್ಲಿ ಪ್ಯಾಕೇಜ್ ಅಪ್‌ಡೇಟುಗಳ ಅಧ್ಯಾಯದ SystemTap ವಿಭಾಗವನ್ನು ನೋಡಿ.
  • Systemtap ಟ್ರೇಸ್‌ಪಾಯಿಂಟುಗಳನ್ನು ಕರ್ನಲ್‌ನ ಅತಿಮುಖ್ಯವಾದ ಭಾಗದಲ್ಲಿ ಇರಿಸಲಾಗಿದ್ದು, ಇದರಿಂದಾಗಿ ಗಣಕ ವ್ಯವಸ್ಥಾಪಕರು ಕೋಡ್‌ನ ಭಾಗದ ಕಾರ್ಯಕ್ಷಮತೆಯನ್ನು ಪರಿಶೀಲಿಸಬಹುದು ಹಾಗು ಸರಿಪಡಿಸಬಹುದಾಗಿದೆ. Red Hat Enterprise Linux 5.4 ರಲ್ಲಿ ಕರ್ನಲ್‌ ಉಪವ್ಯವಸ್ಥೆಯ ಈ ಕೆಳಗಿನ ಭಾಗಗಳಲ್ಲಿ ಟ್ರೇಸ್‌ಪಾಯಿಂಟುಗಳನ್ನು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ:
  • Gnu ಕಂಪೈಲರ್ ಕಲೆಕ್ಷನ್ ಆವೃತ್ತಿ 4.4 (GCC4.4) ಅನ್ನು ಈ ಬಿಡುಗಡೆಯಲ್ಲಿ ತಂತ್ರಜ್ಞಾಣ ಮುನ್ನೋಟವಾಗಿ ಸೇರಿಸಲಾಗಿದೆ. ಕಂಪೈಲರಿನ ಈ ಸಂಗ್ರಹವು C, C++, ಹಾಗು Fortran ಲೈಬ್ರರಿಗಳು ಅವುಗಳ ಬೆಂಬಲ ಲೈಬ್ರರಿಗಳೊಂದಿಗೆ ಹೊಂದಿದೆ.
  • glibc new MALLOC behaviour: ಅಪ್‌ಸ್ಟ್ರೀಮ್‌ನ glibc ಅನ್ನು ಸಾಕೆಟ್‌ಗಳು ಹಾಗು ಕೋರುಗಳಲ್ಲಿ ಉನ್ನತವಾದ ಸ್ಕೇಲೆಬಿಲಿಟಿಯನ್ನು ಶಕ್ತಗೊಳಿಸಲು ಇತ್ತೀಚಿಗೆ ಬದಲಾಯಿಸಲ್ಪಟ್ಟಿದೆ. ಅವುಗಳದ್ದೆ ಆದಂತಹ ಮೆಮೊರಿ ಪೂಲ್‌ಗಳಿಗೆ ಇದನ್ನು ನಿಯೋಜಿಸುವುದರಿಂದ ಹಾಗು ಕೆಲವು ಸಂದರ್ಭಗಳಲ್ಲಿ ಲಾಕ್ ಆಗುವುದನ್ನು ತಪ್ಪಿಸುವ ಮೂಲಕ ಇದನ್ನು ಮಾಡಲಾಗಿದೆ. ಮೆಮೊರಿ ಪೂಲ್‌ಗಳಿಗಾಗಿ (ಇದ್ದಲ್ಲಿ) ಬಳಸಲಾದ ಹೆಚ್ಚುವರಿ ಮೆಮೊರಿಯನ್ನು ಪರಿಸರ ವೇರಿಯೇಬಲ್ ಆದಂತಹ MALLOC_ARENA_TEST ಹಾಗು MALLOC_ARENA_MAX ಇಂದ ನಿಯಂತ್ರಿಸಬಹುದಾಗಿದೆ.
    ಮೆಮೊರಿ ಪೂಲ್‌ಗಳ ಸಂಖ್ಯೆಯು ಒಂದು ನಿರ್ದಿಷ್ಟ ಮೌಲ್ಯಕ್ಕೆ ತಲುಪಿದಾಗ ಆ ಸಂಖ್ಯೆಯ ಕೋರುಗಳಿಗಾಗಿ ಒಂದು ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು MALLOC_ARENA_TEST ಸೂಚಿಸುತ್ತದೆ. ಕೋರುಗಳ ಸಂಖ್ಯೆ ಏನೇ ಆಗಿದ್ದರೂ ಸಹ MALLOC_ARENA_MAX ಬಳಕೆಗಾಗಿ ಗರಿಷ್ಟ ಸಂಖ್ಯೆಯ ಮೆಮೊರಿ ಪೂಲ್‌ಗಳನ್ನು ಹೊಂದಿಸುತ್ತದೆ.
    RHEL 5.4 ಬಿಡುಗಡೆಯಲ್ಲಿನ glibc ಯಲ್ಲಿ ಅಪ್‌ಸ್ಟ್ರೀಮ್‌ malloc ನ ತಂತ್ರಜ್ಞಾನ ಮುನ್ನೋಟವಾಗಿ ಈ ಸವಲತ್ತನ್ನು ಸೇರಿಸಲಾಗಿದೆ. ಪ್ರತಿ-ಎಳೆಯ ಮೆಮೊರಿ ಪೂಲ್‌ಗಳನ್ನು ಶಕ್ತಗೊಳಿಸಲು ಪರಿಸರ ವೇರಿಯೇಬಲ್‌ MALLOC_PER_THREAD ಅನ್ನು ಪರಿಸರದಲ್ಲಿ ಹೊಂದಿಸಬೇಕಾಗುತ್ತದೆ. ಮುಂದಿನ ಬಿಡುಗಡೆಗಳಲ್ಲಿ malloc ವರ್ತನೆಯು ಪೂರ್ವನಿಯೋಜಿತಗೊಂಡಾಗ ಈ ಪರಿಸರ ವೇರಿಯೇಬಲ್ ತೆಗೆದು ಹಾಕಲ್ಪಡುತ್ತದೆ. malloc ಸಂಪನ್ಮೂಲಗಳಲ್ಲಿ ತೊಂದರೆಗಳನ್ನು ಅನುಭವಿಸುತ್ತಿರುವ ಬಳಕೆದಾರರು ಇದನ್ನು ಶಕ್ತಗೊಳಿಸಿ ಪ್ರಯತ್ನಿಸಬಹುದು.

7. ಆರ್ಕಿಟೆಕ್ಚರ್ ನಿಶ್ಚಿತ ಬೆಂಬಲ

7.1. i386

  • ವರ್ಚುವಲ್ ಪರಿಸರದಲ್ಲಿ, Red Hat Enterprise Linux 64-ಬಿಟ್‌ ಕರ್ನಲ್‌ಗಾಗಿ ಸಮಯದ ಲೆಕ್ಕ ಇರಿಸಿಕೊಳ್ಳುವುದು ಸಮಸ್ಯೆಯಾಗಬಹುದು, ಏಕೆಂದರೆ ಟೈಮರಿನ ತಡೆಗಳನ್ನು ಲೆಕ್ಕ ಹಾಕುವ ಮೂಲಕ ಸಮಯದ ಲೆಕ್ಕ ಇರಿಸುತ್ತದೆ.ವರ್ಚುವಲ್ ಗಣಕದ ಶೆಡ್ಯೂಲ್ ಅನ್ನು ತೆಗೆದು ಹಾಕಿದಾಘ ಹಾಗು ಮರಳಿ ಶೆಡ್ಯೂಲ್ ಮಾಡಿದಾಗ ಈ ತಡೆಗಳಿಗೆ ಒಂದಿಷ್ಟು ವಿಳಂಬ ಉಂಟಾಗುತ್ತದೆ, ಇದರಿಂದ ಸಮಯದ ಲೆಕ್ಕ ಇರಿಸುವಲ್ಲಿ ತೊಂದರೆ ಎದುರಾದುತ್ತದೆ. ಈ ಕರ್ನಲ್ ಬಿಡುಗಡೆಯು ಸಮಯದ ಲೆಕ್ಕ ಇರಿಸುವಿಕೆ ಅಲ್ಗಾರಿತಮ್ ಅನ್ನು ಕಳೆದ ಸಮಯದ ಲೆಕ್ಕಿಗವನ್ನು ಬಳಸಿಕೊಂಡು ಮರಳಿ ಸಂರಚನೆಗೊಳಿಸುತ್ತದೆ. (Bugzilla #463573)
  • ಅವುಗಳ ಸಂಗ್ರಹವು (ಸ್ಟಾಕ್) ಒಟ್ಟುಗೂಡಿಸಲಾದ ಗಾತ್ರ ~4GB ಗಿಂತ ಹೆಚ್ಚಾದಲ್ಲಿ, ತ್ರೆಡ್‌ ಮಾಡಲಾದ 64-ಬಿಟ್ ಅನ್ವಯಗಳು pthread_create() ನಲ್ಲಿ ತೀವ್ರವಾಗಿ ನಿಧಾನಗೊಳ್ಳುತ್ತಿತ್ತು. ಇದಕ್ಕೆ ಕಾರಣವೆಂದರೆ glibc ಯು ಈ ಸಂಗ್ರಹಗಳನ್ನು ನಿಯೋಜಿಸಲು MAP_32BIT ಅನ್ನು ಬಳಸುತ್ತಿತ್ತು. As the use of MAP_32BIT ನ ಬಳಕೆಯು ಒಂದು ಸಾಂಪ್ರದಾಯಿಕ ಅನ್ವಯಿಸುವಿಕೆಯಾಗಿರುವುದರಿಂದ, ಅನ್ವಯಗಳನ್ನು ನಿರ್ಬಂಧಪಡಿಸುವುದನ್ನು ತಪ್ಪಿಸಲು ಈ ಅಪ್‌ಡೇಟ್ ಒಂದು ಹೊಸ ಟ್ಯಾಗ್ ಅನ್ನು (MAP_STACK mmap) ಸೇರಿಸುತ್ತದೆ. (ಬಗ್‌ಝಿಲ್ಲಾ #459321)
  • ಡೀಪ್-C ಸ್ಥಿತಿಗಳಲ್ಲಿ TSC ಗಳು ಚಾಲನೆಯಲ್ಲಿರುವುದನ್ನು ಉತ್ತೇಜಿಸುವ ಸವಲತ್ತಿನ ತುಣುಕನ್ನು ಈ ಅಪ್‌ಡೇಟ್ ಒಳಗೊಂಡಿದೆ. ಈ ತುಣುಕು CONSTANT_TSC ನೊಂದಿಗೆ NONSTOP_TSC ಕ್ರಿಯೆಗಳನ್ನು ಒಳಗೊಂಡಿರುತ್ತದೆ. P/T- ಸ್ಥಿತಿಗಳು ಏನೇ ಆಗಿದ್ದರೂ ಸಹ TSC ಯು ನಿಯಮಿತ ಫ್ರೀಕ್ವೆನ್ಸಿಯಲ್ಲಿ ಚಲಾಯಿತಗೊಳ್ಳುತ್ತದೆ ಎನ್ನುವುದನ್ನು CONSTANT_TSC ಸೂಚಿಸುತ್ತದೆ, ಹಾಗು ಡೀಪ್-C ಸ್ಥಿತಿಗಳಲ್ಲಿ TSC ಯು ನಿಲ್ಲುವುದಿಲ್ಲ ಎನ್ನುವುದನ್ನು NONSTOP_TSC ಸೂಚಿಸುತ್ತದೆ. (ಬಗ್‌ಝಿಲ್ಲಾ #474091)
  • ಈ ಅಪ್‌ಡೇಟಿನಲ್ಲಿ, i386, i486, i586 ಹಾಗು i686 ಆರ್ಕಿಟೆಕ್ಚರುಗಳಲ್ಲಿ ಅಥವ ಆರ್ಕಿಟೆಕ್ಚರುಗಳಿಗಾಗಿ ನಿರ್ಮಿಸಲಾದ ಕರ್ನಲ್-ಡೆವೆಲ್ ಪ್ಯಾಕೇಜುಗಳ asm-x86_64 ಹೆಡರುಗಳಿಗಾಗಿ ಒಂದು ತೇಪೆಯನ್ನು (ಪ್ಯಾಚ್) ಸೇರಿಸಲಾಗಿದೆ . (ಬಗ್‌ಝಿಲ್ಲಾ #491775)
  • ಈ ಅಪ್‌ಡೇಟಿನಲ್ಲಿ ಸೇರಿಸಲಾದ ಒಂದು ಪರಿಹಾರದಿಂದಾಗಿ i386 ಆರ್ಕಿಟೆಕ್ಚರಿನಲ್ಲಿ ಬೂಟ್‌ ನಿಯತಾಂಕವಾಗಿ memmap=X$Y ಅನ್ನು ನೀಡುವುದರಿಂದ ಒಂದು ಹೊಸ BIOS ನಕ್ಷೆಯನ್ನು ಪಡೆಯಬಹುದಾಗಿದೆ. (ಬಗ್‌ಝಿಲ್ಲಾ #464500)
  • ಈ ಹಿಂದಿನ ಕರ್ನಲ್ ಬಿಡುಗಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತಹ Non-Maskable Interrupt (NMI) ನೊಂದಿಗಿನ ಒಂದು ತೊಂದರೆಯನ್ನು ಸರಿಪಡಿಸಲು ಈ ಅಪ್‌ಡೇಟ್ ಒಂದು ತೇಪೆಯನ್ನು ಒದಗಿಸುತ್ತದೆ. ಈ ತೊಂದರೆಯು ಹಲವಾರು Intel ಸಂಸ್ಕಾರಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಹಾಗು NMI ವಾಚ್‌ಡಾಗ್ 'stuck' ಆಗಿದೆ ಎಂದು ಮಾಡಲಾಗುತ್ತಿತ್ತು. NMI ಕೋಡ್‌ನಲ್ಲಿನ ಹೊಸ ನಿಯತಾಂಕಗಳು ಈ ಸಮಸ್ಯೆಯನ್ನು ಪರಿಹರಸುತ್ತವೆ. (ಬಗ್‌ಝಿಲ್ಲಾ #500892)
  • ಈ ಬಿಡುಗಡೆಯು HP xw9400 ಹಾಗು xw9300 ಗಳಿಗಾಗಿ PCI ಡೊಮೈನ್ ಬೆಂಬಲವನ್ನು ಮರಳಿ ಒದಗಿಸುತ್ತಿದೆ. (ಬಗ್‌ಝಿಲ್ಲಾ #474891)
  • ಮಾಡ್ಯೂಲ್ powernow-k8 ನಿಯತಾಂಕಗಳನ್ನು /sys/modules ಗೆ ರಫ್ತು ಮಾಡುವ ಕ್ರಿಯೆಯನ್ನು ಸರಿಪಡಿಸಲಾಗಿದೆ. ಈ ಮಾಹಿತಿಯು ಈ ಮೊದಲು ರಫ್ತು ಮಾಡಲು ಸಾಧ್ಯವಾಗುತ್ತಿರಲಿಲ್ಲ.(ಬಗ್‌ಝಿಲ್ಲಾ #492010)

7.2. x86_64

  • linux-2.6-misc-utrace-update.patch ನಲ್ಲಿ ಸೂಕ್ತಗೊಳಿಕೆಯ ದೋಷವೊಂದು ಕಂಡುಬಂದಿತ್ತು. 32-ಬಿಟ್ ಸಂಸ್ಕಾರಕಗಳನ್ನು ಒಂದು 64-ಬಿಟ್ ಗಣಕಗಳ ಮೇಲೆ ಬಳಸಿದಾಗ ವ್ಯವಸ್ಥೆಯ ಕರೆಗಳು ತಪ್ಪಿ ಹೋದಲ್ಲಿ (ಟೇಬಲ್‌ ವ್ಯಾಪ್ತಿಯಿಂದ ಹೊರಕ್ಕೆ) ಗಣಕಗಳು ENOSYS ಅನ್ನು ಮರಳಿಸುತ್ತಿರಲಿಲ್ಲ. ಇದನ್ನು ಸರಿಪಡಿಸಲು ಈ ಕರ್ನಲ್ ಬಿಡುಗಡೆಯಲ್ಲಿ ಒಂದು ತೇಪೆಯನ್ನು(ಪ್ಯಾಚ್) ಒದಗಿಸಲಾಗಿದೆ. (ಬಗ್‌ಝಿಲ್ಲಾ #481682)
  • ಕೆಲವು ಕ್ಲಸ್ಟರ್ ವ್ಯವಸ್ಥೆಗಳು ಅಸ್ಥಿರವಾದ ಸಮಯದ ಆಕರದಿಂದ ಬೂಟ್ ಆಗುತ್ತಿದ್ದವು. ಬೂಟ್‌ ಸಮಯದಲ್ಲಿ TSC (Time Stamp Clock) ಅನ್ನು ಸರಿತೂಗಿಸುವಾಗ ಕರ್ನಲ್‌ನಲ್ಲಿನ ಕೋಡ್‌ ಒಂದು ಮುಕ್ತವಾಗಿರುವ ನಿರ್ವಹಣಾ ಕೌಂಟರ್ ಅನ್ನು (PERFCTR) ಪರೀಶೀಲಿಸದೆ ಇರುವುದು ಇದಕ್ಕೆ ಕಾರಣವಾಗಿತ್ತು. ಇದರಿಂದಾಗಿ ಕೆಲವು ಸಂದರ್ಭಗಳಲ್ಲಿ ವ್ಯವಸ್ಥೆಯು ಒಂದು ಕಾರ್ಯನಿರತ PERFCTR ಗೆ ಪೂರ್ವನಿಯೋಜಿತಗೊಳ್ಳುತ್ತದೆ ಹಾಗು ನಂಬಲು ಅಸಾಧ್ಯವಾದ ಸರಿದೂಗಿಸುವಿಕೆಯನ್ನು ಪಡೆದುಕೊಳ್ಳುತ್ತದೆ.
    ಇದನ್ನು ಸರಿಪಡಿಸಲು ಒಂದು ಪರಿಹಾರವನ್ನು ಒದಗಿಸಲಾಗಿದ್ದು ಇದು ಪೂರ್ವನಿಯೋಜಿತಗೊಳಿಸುವ ಮೊದಲು ಮುಕ್ತವಾದ PERFCTR ಗಾಗಿ ಹುಡುಕಿ ಖಚಿತಪಡಿಸಕೊಳ್ಳುತ್ತದೆ (ಬಗ್‌ಝಿಲ್ಲಾ #467782). ಆದರೆ ಈ ಸರಿಪಡಿಕೆಯು ಸಾಧ್ಯವಿರುವ ಎಲ್ಲಾ ಅನಿರೀಕ್ಷಿತ ಸಂದರ್ಭಗಳಲ್ಲಿಯೂ ಸಹ ಕೆಲಸ ಮಾಡುವುದು ಸಾಧ್ಯವಿಲ್ಲ ಏಕೆಂದರೆ TSC ಸರಿದೂಗಿಕೆಗಾಗಿ ಅಗತ್ಯವಿದ್ದಾಗ ಎಲ್ಲಾ PERFCTRಗಳು ಕಾರ್ಯನಿರತವಾಗಿರುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಗಳು ಉದ್ಭವವಾಗುವಂತಹ ವಿಭಿನ್ನವಾದ ಸಂದರ್ಭಗಳಲ್ಲಿ (1% ಕ್ಕಿಂತ ಕಡಿಮೆ ಸಂದರ್ಭಗಳಲ್ಲಿ) ಕರ್ನಲ್ ಪ್ಯಾನಿಕ್ ಅನ್ನು ಆರಂಭಿಸಲು ಇನ್ನೊಂದು ತೇಪೆಯನ್ನು ಒಳಗೊಳ್ಳಿಸಲಾಗಿದೆ. (ಬಗ್‌ಝಿಲ್ಲಾ #472523).

7.3. PPC

  • ಈ ಕರ್ನಲ್ ಬಿಡುಗಡೆಯು Cell ಸಂಸ್ಕಾರಕಗಳಿಗಾಗಿನ spufs (Synergistic Processing Units file system) ಅನ್ನು ಅಪ್‌ಡೇಟ್ ಮಾಡುವ ಹಲವಾರು ತೇಪೆಗಳನ್ನು(ಪ್ಯಾಚ್) ಒಳಗೊಂಡಿರುತ್ತದೆ. (ಬಗ್‌ಝಿಲ್ಲಾ #475620)
  • show_cpuinfo() ಅನ್ನು ಚಲಾಯಿಸಿದಾಗ /proc/cpuinfo ವು ತಾರ್ಕಿಕ PVR Power7 ಸಂಸ್ಕಾರಕ ಆರ್ಕಿಟೆಕ್ಚರುಗಳನ್ನು "unknown"(ಅಜ್ಞಾತ) ಎಂದು ಗುರುತಿಸುವ ಒಂದು ದೋಷವನ್ನು ಪತ್ತೆ ಮಾಡಲಾಗಿತ್ತು. ಈ ಅಪ್‌ಡೇಟ್‌ನಿಂದಾಗಿ ಇನ್ನು ಮುಂದೆ show_cpuinfo() ವು Power7 ಆರ್ಕಿಟೆಕ್ಚರುಗಳನ್ನು Power6 ಎಂದು ಗುರುತಿಸುತ್ತದೆ. (ಬಗ್‌ಝಿಲ್ಲಾ #486649)
  • System P ಸಂಸ್ಕಾರಕಗಳನ್ನು ಬಳಸುವ ಗಣಕಗಳಲ್ಲಿ MSI-X (Message Signaled Interrupts) ಅನ್ನು ಸೇರಿಸುವ/ಸುಧಾರಿಸುವ ಹಲವಾರು ತೇಪೆಗಳನ್ನು(ಪ್ಯಾಚಸ್) ಹೊಂದಿದೆ.(ಬಗ್‌ಝಿಲ್ಲ #492580)
  • Cell Blades ಗಣಕಗಳಲ್ಲಿ ಈ ಮೊದಲು ಇದ್ದಂತಹ ದೋಷಯುಕ್ತ ಪವರ್ ಗುಂಡಿಯ ಕ್ರಿಯೆಯನ್ನು ಸರಿಪಡಿಸುವ ಒಂದು ಪ್ಯಾಚ್ ಅನ್ನು ಈ ಬಿಡುಗಡೆಯಲ್ಲಿ ಸೇರಿಸಲಾಗಿದೆ. (ಬಗ್‌ಝಿಲ್ಲ #475658)

7.4. s390

IBM System z ಗಣಕಗಳಿಗಾಗಿ ವಿಸ್ತಾರ ವ್ಯಾಪ್ತಿಯ ಹಲವಾರು ಹೊಸ ಸವಲತ್ತುಗಳನ್ನು ಪರಿಚಯಿಸುತ್ತದೆ, ಅವುಗಳಲ್ಲಿ ವಿಶೇಷವಾದವುಗಳೆಂದರೆ:
  • ನೇಮ್ಡ್ ಸೇವ್ಡ್ ಸೆಗ್‌ಮೆಂಟ್ಸ್ (NSS) ಅನ್ನು ಉಪಯೋಗಿಸುವುದರಿಂದ, ನೈಜ ಮೆಮೊರಿ ಪುಟಗಳಲ್ಲಿನ ಕಾರ್ಯ ವ್ಯವಸ್ಥೆಯ ಕೋಡ್ ಅನ್ನು z/VM ಹೈಪರ್ವೈಸರ್ z/VM ಅತಿಥಿ ವರ್ಚುವಲ್ ಗಣಕಗಳಿಗೆ ಲಭ್ಯವಾಗುವಂತೆ ಮಾಡುತ್ತದೆ. ಈ ಅಪ್‌ಡೇಟಿನಿಂದಾಗಿ, z/VM ನಲ್ಲಿನ ಅನೇಕ Red Hat Enterprise Linux ಅತಿಥಿ ಕಾರ್ಯವ್ಯವಸ್ಥೆಗಳು NSS ನಿಂದ ಬೂಟ್ ಮಾಡಬಹುದಾಗಿದೆ ಹಾಗು ಮೆಮೊರಿಯಲ್ಲಿನ ಲಿನಕ್ಸ್ ಕರ್ನಲ್‌ನ ಒಂದು ಪ್ರತಿಯಿಂದ ಚಲಾಯಿಸಬಹುದಾಗಿದೆ (BZ#474646)
  • ಹೊಸ IBM System z PCI ಕ್ರಿಪ್ಟೊಗ್ರಾಫಿ ಎಕ್ಸಲರೇಟರಿಗಾಗಿನ ಸಾಧನ ಚಾಲಕ ಬೆಂಬಲವನ್ನು ಈ ಅಪ್‌ಡೇಟಿಗೆ ಸೇರಿಸಲಾಗಿದೆ, ಹಿಂದಿನ ಆವೃತ್ತಿಗಳಲ್ಲಿ ಬಳಸುವ ಸಂಪರ್ಕಸಾಧನಗಳನ್ನು ಬಳಸಬಹುದಾಗಿದೆ. (BZ#488496)
  • Red Hat Enterprise Linux 5.4 ಪ್ರಕ್ರಿಯೆ ನಿಧಾನಗೊಳಿಕೆಗೆ ಬೆಂಬಲವನ್ನು ನೀಡುತ್ತದೆ, ಇದರಿಂದಾಗಿ ಸಂಸ್ಕಾರಕದ ವೇಗವು ಕೆಲವು ಸಂದರ್ಭಗಳಲ್ಲಿ ಕಡಿಮೆ ಮಾಡಲ್ಪಡುತ್ತದೆ (ಅಂದರೆ, ವ್ಯವಸ್ಥೆಯು ಹೆಚ್ಚು ಬಿಸಿಯಾಗುವಿಕೆ). (BZ#474664) ಈ ಹೊಸ ಸವಲತ್ತು ಸ್ವಯಂಚಾಲಿತ ತಂತ್ರಾಂಶವು ಗಣಕದ ಸ್ಥಿತಿಯನ್ನು ಗಮನಿಸಿ ನಂತರ ನಿಶ್ಚಿತ ನಿಯಮಗಳಿಗೆ ಅನುಸಾರವಾಗಿ ವರ್ತಿಸುವುದನ್ನು ಅನುಮತಿಸುತ್ತದೆ.

    ಸೂಚನೆ

    z990, z890 ಹಾಗು ನಂತರದ ಗಣಕಗಳಲ್ಲಿ ಸಂಸ್ಕಾರಕ ನಿಧಾನಗೊಳ್ಳುವಿಕೆಯನ್ನು ಬೆಂಬಲಿಸಲಾಗುತ್ತದೆ ಹಾಗು SCLP ವ್ಯವಸ್ಥೆ ಸೇವೆ ಇವೆಂಟ್ ಬಗೆ 4 ಇವೆಂಟ್ ಕ್ವಾಲಿಫಯರ್ 3 ಮೂಲಕ ಗಮನಿಸಲಾಗುತ್ತದೆ. STSI ಯು ಹೊಸ ಸಂಸ್ಕಾರಕದ ಸಾಮರ್ಥ್ಯವನ್ನು ಈ ಕಡತದಲ್ಲಿ ವರದಿ ಮಾಡುತ್ತದೆ: /sys/devices/system/cpu/cpuN/capability.
  • ಕಂಟ್ರೋಲ್ ಪ್ರೊಗ್ರಾಮ್ ಐಡೆಂಟಿಫಿಕೇಶನ್ (CPI) ವಿವರಣೆ ದತ್ತಾಂಶವನ್ನು ಹಾರ್ಡ್-ವೇರ್ ಮ್ಯಾನೇಜ್‌ಮೆಂಟ್ ಕನ್ಸೋಲ್ (HMC) ನಲ್ಲಿ ಪ್ರತ್ಯೇಕ ವ್ಯವಸ್ಥೆಗಳನ್ನು ಗುರುತಿಸಲು ಬಯಸಲಾಗುತ್ತದೆ. ಈ ಅಪ್‌ಡೇಟಿನಿಂದಾಗಿ, CPI ದತ್ತಾಂಶವನ್ನು ಒಂದು Red Hat Enterprise Linux ಇನ್‌ಸ್ಟೆನ್ಸಿನೊಂದಿಗೆ ಜೋಡಿಸಬಹುದಾಗಿದೆ. (BZ#475820)
    CPI ಬಗೆಗಿನ ಹೆಚ್ಚಿನ ಮಾಹಿತಿಗಾಗಿ Device Drivers, Features, and Commands document ಅನ್ನು ನೋಡಿ
  • ಫೈಬರ್ ಚಾನಲ್ ಪ್ರೊಟೊಕಾಲ್ (FCP) ಕಾರ್ಯಕ್ಷಮತೆ ದತ್ತಾಂಶವನ್ನು IBM System z ಪ್ಲಾಟ್‌ಫಾರ್ಮಿನಲ್ಲಿನ Red Hat Enterprise Linux ಇನ್‌ಸ್ಟೆನ್ಸುಗಳಲ್ಲಿ ಅಳತೆ ಮಾಡಬಹುದಾಗಿದೆ. (BZ#475334) ಸಂಗ್ರಹಿಸಲಾದ ಹಾಗು ವರದಿ ಮಾಡಲಾದ ಮೆಟ್ರಿಕ್‌ಗಳು ಹೀಗಿವೆ:
    • Linux ಸಾಧನಗಳು, ಸ್ಮಾಲ್ ಕಂಪ್ಯೂಟರ್ ಸಿಸ್ಟಂ ಇಂಟರ್ಫೇಸ್ (SCSI) ಲಾಜಿಕಲ್ ಯೂನಿಟ್‌ ನಂಬರ್ಸ್ (LUNs) ಹಾಗು ಹೋಸ್ಟ್ ಬಸ್ ಅಡಾಪ್ಟರ್ (HBA) ಶೇಖರಣಾ ನಿಯಂತ್ರಕ ಮಾಹಿತಿಯಂತಹ ಸ್ಟಾಕ್ ಘಟಕಗಳಲ್ಲಿನ ಕಾರ್ಯಕ್ಷಮತೆ ಸಂಬಂಧಿತ ದತ್ತಾಂಶ.
    • ಪ್ರತಿ ಸ್ಟಾಕ್‌ನ ಘಟಕ: ಸೂಕ್ತ ಅಳತೆಗಳ ತ್ರೂಪುಟ್, ಬಳಕೆ ಹಾಗು ಉತರೆ ಅನ್ವಯ ಅಳತೆಗಳಾಗಿ ಪ್ರಸಕ್ತ ಮೌಲ್ಯಗಳು.
    • I/O ಮನವಿಗಳಿಗೆ ಸಂಬಂಧಿಸಿದ ದತ್ತಾಂಶಗಳಾದಂತಹ ಗಾತ್ರ, ಪ್ರತಿ ಘಟಕದ ಲೇಟೆನ್ಸಿ ಹಾಗು ಒಟ್ಟು ಪ್ರಮಾಣವನ್ನೂ ಒಳಗೊಂಡಂತೆ ಅಂಕಿಅಂಶೀಯ ಸರಾಸರಿಗಳು (ಕನಿಷ್ಟ, ಗರಿಷ್ಟ, ಸರಾಸರಿಗಳು ಹಾಗು ಹಿಸ್ಟೊಗ್ರಾಮ್).
  • EMC ಸಿಮೆಟ್ರಿಕ್ಸ್ ಕಂಟ್ರೋಲ್ I/O ಅನ್ನು ಒದಗಿಸುವಂತೆ ಕರ್ನಲ್‌ಗೆ ಬೆಂಬಲವನ್ನು ಸೇರಿಸಲಾಗಿದೆ. ಈ ಅಪ್‌ಡೇಟಿನಿಂದಾಗಿ EMC ಸಿಮಿಟ್ರಿಕ್ಸ್ ಶೇಖರಣಾ ಅರೆಗಳನ್ನು(array) IBM System z ಪ್ಲಾಟ್‌ಫಾರ್ಮಿನಲ್ಲಿನ Red Hat Enterprise Linux ನೊಂದಿಗೆ ನಿರ್ವಹಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. (BZ#461288)
  • Red Hat Enterprise Linux ವರ್ಚುವಲ್ ಗಣಕದಲ್ಲಿ ಕರ್ನಲ್ ಪ್ಯಾನಿಕ್ ಹಾಗು ಬಿಸುಟಾದ(ಡಂಪ್) ನಂತರ ಇನಿಶಿಯಲ್ ಪ್ರೊಗ್ರಾಮ್ ಲೋಡ್ (IPL) ಅನ್ನು ನಿರ್ವಹಿಸುವಂತೆ ಕರ್ನಲ್‌ಗೆ ಒಂದು ಹೊಸ ಸೌಕರ್ಯವನ್ನು ಅನ್ವಯಿಸಲಾಗಿದೆ.(BZ#474688)
  • ಸಂರಚನಾ ಟೊಪಾಲಜಿ ಸವಲತ್ತನ್ನು ಬೆಂಬಲಿಸುವ ಯಂತ್ರಾಂಶವು ವ್ಯವಸ್ಥೆಯ CPU ಟೊಪಾಲಜಿ ಮಾಹಿತಿಯನ್ನು ಶೆಡ್ಯೂಲರಿಗೆ ಕಳಿಸುತ್ತದೆ, ಇದರಿಂದಾಗಿ ಹೊರೆ ಸಮತೋಲನ ಮಾಡುವಿಕೆಯನ್ನು ನಿರ್ಧರಿಸಲು ಅದಕ್ಕೆ ಅವಕಾಶ ನೀಡಲಾಗುತ್ತದೆ. I/O ತಡೆಗಳನ್ನು ಸರಿಸಮನಲ್ಲದ ರೀತಿಯಲ್ಲಿ ವಿತರಿಸಲಾಗುವ ಗಣಕಗಳಲ್ಲಿ, ಒಟ್ಟಿಗೆ ಗುಂಪುಗೂಡಿಸಲಾದ ಹಾಗು ಬೇರೆಯವುಗಳಿಗಿಂತ ಹೆಚ್ಚು I/O ತಡೆಗಳನ್ನು ಪಡೆಯುವ CPUಗಳು ಸರಾಸರಿಗಿಂತ ಹೆಚ್ಚಿನ ಹೊರೆಯನ್ನು ಪಡೆಯುವ ಸಾಧ್ಯತೆ ಇದ್ದು ಇದರಿಂದಾಗಿ ಕೆಲವು ಸಂದರ್ಭಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ.
    ಈ ಹಿಂದೆ, CPU ಟಾಪೊಲಜಿ ಬೆಂಬಲವನ್ನು ಪೂರ್ವನಿಯೋಜಿತವಾಗಿ ಶಕ್ತಗೊಳಿಸಲಾಗುತ್ತಿತ್ತು. ಈ ಅಪ್‌ಡೇಟಿನೊಂದಿಗೆ, CPU ಟಾಪೊಲಜಿ ಬೆಂಬಲವನ್ನು ಪೂರ್ವನಿಯೋಜಿತವಾಗಿ ಅಶಕ್ತಗೊಳಿಸಲಾಗುತ್ತದೆ, ಹಾಗು ಈ ಸವಲತ್ತು ಶಕ್ತವಾಗಿ ಇರಿಸಲು ಕರ್ನಲ್ ನಿಯತಾಂಕ "topology=on" ಅನ್ನು ಸೇರಿಸಲಾಗಿದೆ. (BZ#475797)
  • CMS parmfile ನಲ್ಲಿರುವುದನ್ನು ಬದಲಾಯಿಸದೆ ಈಗ IPL ಆಜ್ಞೆಯನ್ನು ಬಳಸಿಕೊಂಡು ಹೊಸ ಕರ್ನಲ್ ಆಯ್ಕೆಗಳನ್ನು ಸೇರಿಸಬಹುದಾಗಿದ್ದು, ಇದರಿಂದ parmfile ದಿಂದ ನೀಡಲಾದ ಕರ್ನಲ್ ಆಯ್ಕೆಗಳನ್ನು ತಾತ್ಕಾಲಿಕವಾಗಿ ತಿದ್ದಿಬರೆಯಲಾಗುತ್ತದೆ. ಇದು parmfile ನಲ್ಲಿನ ಕರ್ನಲ್ ಆಯ್ಕೆಗಳನ್ನು ಬೈಪಾಸ್ ಮಾಡಿ, ಸಂಪೂರ್ಣ ಬೂಟ್‌ ಆಜ್ಞೆಯನ್ನು VM ನಿಯತಾಂಕ ವಾಕ್ಯದಿಂದ ತಿದ್ದಿ ಬರೆಯಲು ಅವಕಾಶ ಕಲ್ಪಿಸುತ್ತದೆ. ಅಷ್ಟೆ ಅಲ್ಲದೆ,ಬಳಕೆದಾರರು CP/CMS ಆಜ್ಞಾ ಸಾಲಿನಲ್ಲಿ ಹೊಸ Linux ನೇಮಡ್ ಸೇವಡ್ ಸಿಸ್ಟಂಸ್ (NSS) ಅನ್ನು ನಿರ್ಮಿಸಬಹುದಾಗಿದೆ. (BZ#475530)
  • qeth ಚಾಲಕವನ್ನು HiperSockets Layer3 ಬೆಂಬಲದೊಂದಿಗೆ IPv6 ಗಾಗಿ ಅಪ್‌ಡೇಟ್ ಮಾಡಲಾಗಿದೆ. (BZ#475572)ಈ ಸವಲತ್ತಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, IBM ನ http://www.ibm.com/developerworks/linux/linux390/october2005_documentation.html ನಲ್ಲಿರುವ IBM ನ "Device Drivers, Features, and Commands" ಪುಸ್ತಕದಲ್ಲಿನ "qeth device driver for OSA-Express (QDIO) and HiperSockets" ಅಧ್ಯಾಯವನ್ನು ನೋಡಿ
  • z9 HiperSocket ಫರ್ಮ್-ವೇರಿನಿಂದ ಆರಂಭಿಸದಾಗ ಅದು ಒಂದು ವಿಭಿನ್ನವಾದ ವಿನ್ಯಾಸದಲ್ಲಿ ಆವೃತ್ತಿಯ ವಾಕ್ಯವನ್ನು ನೀಡುತ್ತದೆ. ಈ ಬದಲಾವಣೆಯಿಂದಾಗಿ ಸಾಧನವನ್ನು ಆನ್‌ಲೈನಿನಲ್ಲಿ ಹೊಂದಿಸುವಾಗ ಒದಗಿಸಲಾದ qeth ಸ್ಥಿತಿ ಸಂದೇಶದಲ್ಲಿ mcl_level ಮಾಹಿತಿಯು ಕಾಣೆಯಾಗಲು ಕಾರಣವಾಗಿತ್ತು. ಅಪ್‌ಡೇಟ್ ಮಾಡಲಾದ qeth ಚಾಲಕವು ಈಗ HiperSockets ನ ಹೊಸ ಆವೃತ್ತಿ ವಾಕ್ಯವನ್ನು ಸರಿಯಾಗಿ ಓದುತ್ತದೆ, ಇದು ಒಂದು ಶಿಷ್ಟವಾದ ಔಟ್‌ಪುಟ್ ವಿನ್ಯಾಸಕ್ಕೆ ಕಾರಣವಾಗುತ್ತದೆ. (BZ#479881)
  • Red Hat Enterprise Linux 5.4 ರಲ್ಲಿ, s390utils ಪ್ಯಾಕೇಜ್ ಅನ್ನು ಆವೃತ್ತಿ 1.8.1 ಗೆ ರೀಬೇಸ್ ಮಾಡಲಾಗಿದೆ. ಈ ರೀಬೇಸ್ ಒದಗಿಸುವ ಸೌಕರ್ಯಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ತಾಂತ್ರಿಕ ಟಿಪ್ಪಣಿಗಳಲ್ಲಿನ ಪ್ಯಾಕೇಜ್ ಅಪ್‌ಡೇಟ್‌ಗಳ ಅಧ್ಯಾಯವನ್ನು ನೋಡಿ. (BZ#477189)
  • ಕರ್ನಲ್‌ನಲ್ಲಿ, ಟ್ರಿಗರುಗಳನ್ನು ಸ್ಥಗಿತಗೊಳಿಸುವ ಸಲುವಾಗಿ ಸಂಬಂಧಿತವಾದ ಕ್ರಿಯೆಗಳಿಗೆ ಅನ್ವಯಿಸಲು ಒಂದು sysfs ಸಂಪರ್ಕಸಾಧನವನ್ನು ಅನ್ವಯಿಸಲಾಗಿದೆ. ಈ ಸವಲತ್ತಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, IBM ನ http://www.ibm.com/developerworks/linux/linux390/development_documentation.html ನಲ್ಲಿರುವ "Device Drivers, Features, and Commands" ಪುಸ್ತಕದಲ್ಲಿನ "Shutdown actions" ಅಧ್ಯಾಯವನ್ನು ನೋಡಿ

8.1. ಸಾಮಾನ್ಯ ಕರ್ನಲ್ ಸವಲತ್ತು ಬೆಂಬಲ

  • ಈ ಹಿಂದೆ, ಅಪ್‌ಸ್ಟ್ರೀಮ್ ಕರ್ನಲ್‌ನಲ್ಲಿ ಕಚ್ಛಾ(ರಾ) ಸಾಧನಗಳಿಗಾಗಿನ ಬೆಂಬಲವನ್ನು ತೆಗೆದು ಹಾಕಲಾಗಿತ್ತು. ಆದರೆ, ಈ ಬೆಂಬಲವನ್ನು ಕರ್ನಲ್‌ಗೆ ಮರಳಿಸಲಾಗಿದೆ. ಅದರ ಪರಿಣಾಮವಾಗಿ, Red Hat Enterprise Linux 5.4 ರಲ್ಲಿ, ಕಚ್ಛಾ ಸಾಧನಗಳಿಗೆ ಬೆಂಬಲವನ್ನು ಮರಳಿಸಲಾಗಿದೆ. ಹೆಚ್ಚುವರಿಯಾಗಿ, initscripts ಪ್ಯಾಕೇಜುಗಳನ್ನು ಅಪ್‌ಡೇಟ್‌ ಮಾಡಲಾಗಿದ್ದು, ಇದರಿಂದಾಗಿ ಈ ಹಿಂದೆ ಬಿಟ್ಟು ಬಿಡಲಾದ ಕಚ್ಛಾ ಸಾಧನಗಳ ಸೌಕರ್ಯವನ್ನು ಮರಳಿ ಸೇರಿಸಲಾಗಿದೆ.(BZ#472891)
  • KVM guest-smp tlb ಯು mmu-notifiers ಇಲ್ಲದೆ ಫ್ಲಶಿಂಗ್ ಮಾಡುವುದರಿಂದ ಮೆಮೊರಿಯು ಹಾಳಾಗುವ ಸಾಧ್ಯತೆ ಇದೆ ಏಕೆಂದರೆ ಒಂದು vcpu ಇನ್ನೂ ಸಹ ಕರ್ನಲ್ ಮುಕ್ತಪಟ್ಟಿಗೆ (ಫ್ರೀಲಿಸ್ಟಿಗೆ) ಅತಿಥಿ ಕ್ರಮದ ಮೂಲಕ ಬರೆಯುತ್ತಿರುವಾಗಲೆ KVM ಅದಕ್ಕೆ ಪುಟಗಳನ್ನು ಸೇರಿಸಬಹುದು. ಈ ಅಪ್‌ಡೇಟ್ ಕರ್ನಲ್‌ಗೆ mmu-notifier ಬೆಂಬಲವನ್ನು ಸೇರಿಸುತ್ತದೆ ಹಾಗು ಈ ಹಿಂದೆ ಇದ್ದಂತಹ ಒಂದು ದೋಷವಾದಂತಹ ಅಸ್ತಿತ್ವದಲ್ಲಿರುವ ಚಾಲಕಗಳ ಮೂಲಕ mm_struct ವು ಬೆಳೆಸಲ್ಪಡುತ್ತದೆ ಹಾಗು ಇದು kABI ಪರಿಶೀಲಿನೆಯು ವಿಫಲಗೊಳ್ಳುತ್ತಿದ್ದನ್ನು ಈ ಸರಿಪಡಿಸುತ್ತದೆ. ಈ ದೋಷವನ್ನು ರಚನೆ ಗಾತ್ರವು ಹಿಗ್ಗುವುದನ್ನು ತಡೆಯುವ ಬಳಕೆಯಾಗದೆ ಇರುವ ಪ್ಯಾಡಿಂಗ್ ರಂಧ್ರದಲ್ಲಿ ಇರುವ ಒಂದು ಸೂಚಿಯನ್ನು (ಇಂಡೆಕ್ಸ್) ಬಳಸಿಕೊಂಡು ಈ ದೋಷವನ್ನು ಸರಿಪಡಿಸಲಾಗಿದೆ. (ಬಗ್‌ಝಿಲ್ಲಾ #485718)
  • ಸೂಚಕ(ಪಾಯಿಂಟರ್) ಹಾಗು ಸಹಿ ಮಾಡಲಾದ ಅರಿತ್‌ಮೆಟಿಕ್ ಓವರ್ಫ್ಲೊ ಆವರಿಕೆ (ವ್ರಾಪಿಂಗ್) ಅನ್ನು ಹಿಂದಿನ ಲಿನಕ್ಸ್ ಕರ್ನಲ್‌ನಲ್ಲಿ ವಿವರಿಸಲಾಗಿತ್ತು. ಇದರಿಂದಾಗಿ GCC (GNU C ಕಂಪೈಲರ್) ಯು ಆವರಿಕೆ ಸಂಭವಿಸುವುದಿಲ್ಲ ಹಾಗು ಓವರ್ಫ್ಲೊ ಪರೀಕ್ಷೆಗೆ ಕರ್ನಲ್‌ಗೆ ಅಗತ್ಯವಿರಬಹುದಾದ ಅರಿತ್‌ಮೆಟಿಕ್ ಅನ್ನು ಸೂಕ್ತವಾಗಿಸಲು ಪ್ರಯತ್ನಿಸುತ್ತದೆ. ಈ ಅಪ್‌ಡೇಟ್ ಆವರಿಕೆ ವರ್ತನೆಯನ್ನು ಸೂಚಿಸುವ ಸಲುವಾಗಿGCC CFLAGS ಗೆ -fwrapv ವೇರಿಯೇಬಲ್ ಅನ್ನು ಸೇರಿಸುತ್ತದೆ.(ಬಗ್‌ಝಿಲ್ಲಾ #491266)
  • ಒಂದೆ ಮೆಮೊರಿ ಸ್ಥಳಕ್ಕಾಗಿ ಪೈಪೋಟಿ ನಡೆಸುವ ಪ್ರಕ್ರಿಯೆಗಳ ನಡುವಿನ ಹೋರಾಟದ ಒಂದು ದೋಷವನ್ನು TPC-C (Transaction Processing Council) ಬೆಂಚ್‌ಮಾರ್ಕಿಂಗ್‌ನಲ್ಲಿ ಗುರುತಿಸಲಾಗಿದೆ. ಈ ಅಪ್‌ಡೇಟ್‌ನಲ್ಲಿ fast-gup ತೇಪೆಗಳನ್ನು ಸೇರ್ಪಡಿಸಲಾಗಿದ್ದು ಇದು ನೇರವಾದ IO ಅನ್ನು ಬಳಸುತ್ತದೆ ಹಾಗು ಕಾರ್ಯಕ್ಷಮತೆಯಲ್ಲಿ ಗಮನಾರ್ಹವಾದ (9-10% ವರೆಗೆ) ಸುಧಾರಣೆಯನ್ನು ಒದಗಿಸುತ್ತದೆ. ಈ ಅಪ್‌ಡೇಟ್ ಅನ್ನು ಸ್ಕೇಲೆಬಿಲಿಟಿಯ ಸುಧಾರಣೆಯ ಬಗೆಗೆ 5.4 ರ ಕರ್ನಲ್‌ನಲ್ಲಿ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಈ ಲೇಖನವನ್ನು ನೋಡಿ . (ಬಗ್‌ಝಿಲ್ಲಾ #474913)
  • ಈ ಕರ್ನಲ್‌ಗೆ ಒಂದು ಹೊಸತಾದ ಸರಿಪಡಿಸಬಹುದಾದ(ಟ್ಯೂನೇಬಲ್) ನಿಯತಾಂಕವನ್ನು ಸೇರಿಸಬಹುದಾಗಿದ್ದು, ಇದರಿಂದಾಗಿ ವ್ಯವಸ್ಥೆಯ ವ್ಯವಸ್ಥಾಪಕರುಪ್ರತಿ ಬಾರಿ ಇಟಿರೇಶನ್ ಅನ್ನು ಚಲಾಯಿಸಿದಾಗಲೂ kupdate ಡಿಸ್ಕಿಗೆ ಬರೆಯಬಹುದಾದ ಮಾರ್ಪಡಿಸಲಾದ ಪುಟಗಳ ಗರಿಷ್ಟ ಸಂಖ್ಯೆಯನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ.ಈ ಟ್ಯೂನೆಬಲ್ /proc/sys/vm/max_writeback_pages, 1024 ಅಥವ 4MB ಗೆ ಪೂರ್ವನಿಯೋಜಿತಗೊಳ್ಳುತ್ತದೆ, ಇದರಿಂದಾಗಿ kupdate ನ ಪ್ರತಿ ಇಟಿರೇಶನ್‌ನಲ್ಲೂ 1024 ಪುಟಗಳು ಬರೆಯಲ್ಪಡುತ್ತವೆ . (ಬಗ್‌ಝಿಲ್ಲಾ #479079).
  • ಪ್ರತಿ ಪ್ರಕ್ರಿಯೆಯಲ್ಲಿನ IO ಅಂಕಿಅಂಶಗಳನ್ನು ಮೇಲ್ವಿಚಾರಣೆ ನಡೆಸುವ ಸಲುವಾಗಿ ಒಂದು ಹೊಸ ಆಯ್ಕೆಯನ್ನು (CONFIG_TASK_IO_ACCOUNTING=y) ಕರ್ನಲ್‌ಗೆ ಸೇರಿಸಲಾಗಿದೆ. ಇದು ಉತ್ಪಾದನಾ ಪರಿಸರದಲ್ಲಿ ದೋಷ ನಿವಾರಣೆಗೆ ನೆರವಾಗುತ್ತದೆ. (ಬಗ್‌ಝಿಲ್ಲಾ #461636)
  • ಹಿಂದಿನ ಕರ್ನಲ್‌ಗಳಲ್ಲಿ, ಬ್ಯಾಕ್-ಅಪ್‌ ಪ್ರಕ್ರಿಯೆಗಳು DB2 ಪರಿಚಾರಕದ ಪತ್ಯುತ್ತರ ನೀಡಕೆಯ ಕ್ಷಮತೆಯನ್ನು ಕ್ಷೀಣಿಸುತ್ತಿದ್ದವು. ಅರ್ಧಕ್ಕಿಂತಲೂ ಹೆಚ್ಚಿನ ಮ್ಯಾಪ್‌ ಮಾಡದೆ ಇರುವ ಪೇಜ್‌ಕ್ಯಾಶೆ ಮೆಮೊರಿಯು ಹಾಳಾಗಿದ್ದಾಗ (dirty_ratio ಅನ್ನು 100% ಗೆ ಹೊಂದಿಸಿದರೂ ಸಹ) ಪೇಜ್‌ಕ್ಯಾಶೆ ಮೆಮೊರಿಗೆ ಬರೆಯುವ ಪ್ರಕ್ರಿಯೆಗಳನ್ನು /proc/sys/vm/dirty_ratio ತಡೆಯುಂಟು ಮಾಡುತ್ತಿದ್ದುದೆ ಇದಕ್ಕೆ ಕಾರಣವಾಗಿತ್ತು. ಈ ಮಿತಿಗೊಳಿಕಾ ವರ್ತನೆಯನ್ನು ಸರಿಪಡಿಸುವ ಸಲುವಾಗಿ ಕರ್ನಲ್‌ಗೆ ಒಂದು ಬದಲಾವಣೆಯನ್ನು ಮಾಡಲಾಗಿದೆ. ಈಗ, dirty_ratio ಅನ್ನು 100% ಗೆ ಬದಲಾಯಿಸಿದಲ್ಲಿ, ಪೇಜ್‌ಕ್ಯಾಶೆ ಮೆಮೊರಿಗೆ ಬರೆಯುವುದಕ್ಕೆ ವ್ಯವಸ್ಥೆಯು ಅಡ್ಡಿ ಮಾಡುವುದಿಲ್ಲ. (ಬಗ್‌ಝಿಲ್ಲಾ #295291)
  • ramdisk ಚಾಲಕವು ಯೋಗ್ಯವಾದ ವ್ಯವಸ್ಥೆಯ ಹೊರೆಯ ಅಡಿಯಲ್ಲಿ ದೊಡ್ಡದಾದ ramdisk ಅನ್ನು ಬಳಸಿದಾಗ ಈ ಹಿಂದಿನ ಕರ್ನಲ್‌ನಲ್ಲಿನ rd_blocksize ಆಯ್ಕೆಯಿಂದಾಗಿ ದತ್ತಾಂಶ ಹಾಳಾಗುವಿಕೆಗೆ ಕಾರಣವಾಗುತ್ತಿತ್ತು. ಈ ಅಪ್‌ಡೇಟ್ ಅನಗತ್ಯವಾದ ಆಯ್ಕೆಯನ್ನು ಹಾಗು ದತ್ತಾಂಶ ಹಾಳಾಗುವಿಕೆಯ ತೊಂದರೆಯನ್ನು ಸರಿಪಡಿಸುತ್ತದೆ. (ಬಗ್‌ಝಿಲ್ಲಾ #480663)
  • ಕಾರ್ಯ getrusage ಅನ್ನು ಒಂದು ಪ್ರಕ್ರಿಯೆಯ ಸಂಪನ್ಮೂಲದ ಬಳಕೆಯನ್ನು ಪರಿಶೀಲಿಸಲು ಬಳಸಲ್ಪಡುತ್ತದೆ. ಇದು ಸಂಪನ್ಮೂಲ ಬಳಕೆಯ ಸಮಯದಲ್ಲಿ ತೊಂದರೆಗಳನ್ನು ಪರಿಹರಿಸಲು ಹಾಗು ದತ್ತಾಂಶವನ್ನು ಪಡೆಯಲು ನೆರವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, getrusage ನಿಂದ ತನಿಖೆ ನಡೆಸಿದಾಗ ಉಪ ಪ್ರಕ್ರಿಯೆ ಎಳೆಗಳನ್ನು ಹೆಚ್ಚಿಸುತ್ತಿತ್ತು, ಆದರೆ, ಇದರ ಫಲಿತಾಂಶವು ಅಸಮರ್ಪಕವಾಗಿರುತ್ತಿತ್ತು ಏಕೆಂದರೆ getrusage ವು ಕೇವಲ ಮೂಲ ಪ್ರಕ್ರಿಯೆಯನ್ನು ಮಾತ್ರ ಪರಿಶೀಲಿಸುತ್ತದೆಯೆ ಹೊರತು ಉಪ ಪ್ರಕಿಯೆಗಳನ್ನಲ್ಲ. ಈ ಅಪ್‌ಡೇಟ್‌ನಲ್ಲಿ ಇಂತಹ ಸಂದರ್ಭಗಳಲ್ಲಿ ಸಂಪನ್ಮೂಲಗಳ ಸೂಕ್ತವಾದ ಬಳಕೆಯ ಫಲಿತಾಂಶವನ್ನು ಒದಗಿಸುವಂತೆ rusadge_thread ಅನ್ನು ಸೇರಿಸಲಾಗಿದೆ. (ಬಗ್‌ಝಿಲ್ಲಾ #451063)
  • ಹೆಡರ್ /usr/include/linux/futex.h ಈ ಮೊದಲು C ಆಕರ ಸಂಕೇತ ಕಡತಗಳನ್ನು ಕಂಪೈಲ್ ಮಾಡುವಲ್ಲಿ ಹಸ್ತಕ್ಷೇಪ ಮಾಡುತ್ತಿತ್ತು, ಇದರ ಪರಿಣಾಮವಾಗಿ ದೋಷ ಎದುರಾಗುತ್ತಿತ್ತು. ಈ ಅಪ್‌ಡೇಟಿನಲ್ಲಿ ಸೇರಿಸಲಾದ ತೇಪೆಯು ಕೇವಲ ದೋಷಯುಕ್ತವಾದ ಕರ್ನಲ್‌ ಮಾತ್ರವಾದ ವಿವರಣೆಗಳನ್ನು ಸರಿಪಡಿಸುವ ಹಾಗು ಕಂಪೈಲಿಂಗ್ ದೋಷವನ್ನು ಪರಿಹರಿಸುತ್ತದೆ. (ಬಗ್‌ಝಿಲ್ಲಾ #475790)
  • ಈ ಹಿಂದಿನ ಕರ್ನಲ್‌ಗಳಲ್ಲಿ ಪ್ಯಾನಿಕ್ ಅಥವ oops ಔಟ್‌ಪುಟ್ ಸಂದೇಶಗಳಲ್ಲಿ ಕರ್ನಲ್‌ ಆವೃತ್ತಿಯನ್ನು ಗುರುತಿಸಲಾಗುತ್ತಿರಲಿಲ್ಲ. ಈ ಅಪ್‌ಡೇಟ್‌ನಲ್ಲಿ oops ಹಾಗು ಪ್ಯಾನಿಕ್‌ ಔಟ್‌ಪುಟ್‌ನಲ್ಲಿ ಕರ್ನಲ್ ಆವೃತ್ತಿಯ ವಿವರಗಳನ್ನು ಸೇರಿಸುತ್ತದೆ. (ಬಗ್‌ಝಿಲ್ಲಾ #484403)
  • 2.6.18 ರ ಬಿಡುಗಡೆಯ ಸಂದರ್ಭದಲ್ಲಿ, glibc ಪ್ಯಾಕೇಜ್‌ಗಾಗಿ ಕರ್ನಲ್-ಹೆಡರುಗಳನ್ನು ಒದಗಿಸುವಂತೆ ಕರ್ನಲ್ ಅನ್ನು ಸಂರಚಿಸಲಾಗಿತ್ತು. ಈ ಪ್ರಕ್ರಿಯೆಯಿಂದಾಗಿ ಹಲವಾರು ಕಡತಗಳನ್ನು ಸೇರಿಸಲ್ಪಟ್ಟಿದೆ ಎಂದು ತಪ್ಪಾಗಿ ಗುರುತು ಹಾಕಲಾಗುತ್ತಿತ್ತು. serial_reg.h ಕಡತವು ತಪ್ಪಾಗಿ ಗುರುತು ಹಾಕಲಾಗಿದ್ದು ಹಾಗು kernel_headers rpm ನಲ್ಲಿ ಸೇರಿಸಲಾಗಿಲ್ಲ. ಇದರಿಂದಾಗಿ ಬೇರೆ ಹಲವಾರು rpmಗಳನ್ನು ನಿರ್ಮಿಸುವಲ್ಲಿ ತೊಂದರೆ ನೀಡುತ್ತಿತ್ತು. ಈ ಅಪ್‌ಡೇಟ್‌ serial_reg.h ಕಡತವನ್ನು ಒದಗಿಸಲಿದ್ದು ಹಾಗು ಈ ತೊಂದರೆಯನ್ನು ಸರಿಪಡಿಸುತ್ತದೆ. (ಬಗ್‌ಝಿಲ್ಲಾ #463538)
  • ಕೆಲವು ಸಂದರ್ಭಗಳಲ್ಲಿ HP Unified Parallel C (UPC) ಉತ್ಪನ್ನದಲ್ಲಿ ಪ್ರಕ್ರಿಯೆ ವ್ಯವಸ್ಥಾಪಕವಾದಂತಹ upcrund ESRCH ಫಲಿತಾಂಶವನ್ನು ನೀಡುತ್ತಿತ್ತು ಹಾಗು ಒಂದು ಉಪ-ಎಳೆಯ ಮೂಲಕ ವಿಭಜಿಸಿದ(ಫೋರ್ಕ್) ಒಂದು ಉಪ ಪ್ರಕ್ರಿಯೆಗೆ setpgid() ಅನ್ನು ರವಾನಿಸಿದಾಗ ವಿಫಲಗೊಳ್ಳುತ್ತಿತ್ತು. ಈ ಅಪ್‌ಡೇಟ್‌ನಲ್ಲಿ ಈ ತೊಂದರೆಯನ್ನು ನೀಗಿಸುವ ಒಂದು ಪರಿಹಾರವನ್ನು ಸೇರಿಸಲಾಗಿದೆ. (ಬಗ್‌ಝಿಲ್ಲಾ #472433)
  • ಚಾಲಿತಗೊಳ್ಳುತ್ತಿರುವ ಪ್ರಕ್ರಿಯೆಗಳ ಬಗೆಗಿನ ಬ್ಯಾಕ್‌ಟ್ರೇಸ್ ಮಾಹಿತಿಯನ್ನು ಪಡೆದುಕೊಳ್ಳಲು sysrq-t ಕ್ರಿಯೆಯನ್ನು ಸೇರಿಸಲಾಗಿದೆ. ಇದರಿಂದಾಗಿ ಸ್ತಬ್ಧಗೊಂಡ ವ್ಯವಸ್ಥೆಗಳ ತೊಂದರೆಯನ್ನು ಸರಿಪಡಿಸಬಹುದಾಗಿದೆ. (ಬಗ್‌ಝಿಲ್ಲಾ #456588)

8.1.1. ದೋಷ ನಿವಾರಣೆ

Red Hat Enterprise Linux 5.4 ರಲ್ಲಿ, ಕರ್ನಲ್‌ನಲ್ಲಿನ ದೋಷ ನಿವಾರಣೆಯ ಜೊತೆಗೆ ಕೋರ್ ಡಂಪ್‌ ಅನ್ನು ಉತ್ಪಾದಿಸುವ ಸವಲತ್ತುಗಳನ್ನು ಸೇರಿಸಲಾಗಿದೆ. ವ್ಯವಸ್ಥೆಯ ದೋಷ ನಿವಾರಣೆಗಾಗಿ ಹಾಗು ಕರ್ನಲ್‌ ಕುಸಿತಗೊಂಡಾಗ ಕೋರ್‌ ಡಂಪ್‌ಗಳು (ಮೆಮೊರಿ ಸ್ನ್ಯಾಪ್‌ಶಾಟ್‌ಗಳು) ನೆರವಾಗುತ್ತದೆ. ಈ ಅಪ್ಡೇಟ್‌ನಿಂದಾಗಿ, ಬೃಹತ್ ಪುಟಗಳನ್ನು ಬಳಸುವ ವ್ಯವಸ್ಥೆಗಳಲ್ಲಿ ಒಂದು ಕೋರ್ ಡಂಪ್ ಅನ್ನು ನಿರ್ವಹಿಸಲು ನೆರವಾಗುತ್ತದೆ.(BZ#470411) ಜೊತೆಗೆ, ಕರ್ನಲ್ ಪ್ಯಾನಿಕ್ ಸಂದೇಶಗಳನ್ನು makedumpfile ಆಜ್ಞೆಯನ್ನು ಬಳಸಿಕೊಂಡು ಕೋರ್ ಡಂಪ್ ಕಡತಗಳಿಂದ(vmcore) ಹೊರತೆಗೆಯಬಹುದಾಗಿದೆ. (BZ#485308)

8.1.2. ಸುರಕ್ಷತೆ

  • ಈ ಅಪ್‌ಡೇಟ್‌ನಲ್ಲಿ ಕರ್ನಲ್ ಕೀಲಿ ಸ್ಥಳವನ್ನು ಈ ಹಿಂದಿನ ಕರ್ನಲ್‌ಗಳಲ್ಲಿದಂತಹ 32 ಅಕ್ಷರಗಳ ಉದ್ದವನ್ನು 255 ಅಕ್ಷರಗಳಿಗೆ ಬದಲಾಯಿಸಲಾಗಿದೆ. (ಬಗ್‌ಝಿಲ್ಲಾ #475145)
  • NFSD (ನೆಟ್‌ವರ್ಕ್ ಫೈಲ್ ಸಿಸ್ಟಂ ಡೆಮನ್) ಅನ್ನು ಬಳಸಿಕೊಂಡು ರೂಟ್‌-ಅಲ್ಲದ ಬಳಕೆದಾರರು ರಫ್ತು ಮಾಡಲಾದ ಕಡತ ವ್ಯವಸ್ಥೆಗಳ ಮೇಲೆ ಸಾಧನ ನೋಡ್‌ಗಳನ್ನು ರಚಿಸುವುದರಿಂದ ಉಂಟಾಗುತ್ತಿದ್ದಂತ ಸುರಕ್ಷತಾ ಅಪಾಯಕ್ಕಾಗಿ ಪರಿಹಾರ ಸೂಚಿಸುತ್ತದೆ. ಕಡತ ವ್ಯವಸ್ಥೆ ಮಾಸ್ಕಿನಲ್ಲಿ FSUID ಯು 0 ಆಗಿರುವ ಬಳಕೆದಾರರಿಗೆ ಈ ಅಪ್‌ಡೇಟ್ CAP_MKNOD ಹಾಗು CAP_LINUX_IMMUTABLE) ಸಾಮರ್ಥ್ಯವನ್ನು ಮರಳಿಸುತ್ತದೆ. (ಬಗ್‌ಝಿಲ್ಲಾ #497272 ಹಾಗು ಬಗ್‌ಝಿಲ್ಲಾ #499076)
  • ಫೆಡರಲ್ ಇನ್ಫಾರ್ಮೇಶನ್ ಪ್ರೊಸೆಸಿಂಗ್ ಸ್ಟ್ಯಾಂಡರ್ಡೈಸೇಶನ್ 140 (FIPS140) ಪ್ರಮಾಣಪತ್ರದ ಅಗತ್ಯತೆಗಳನ್ನು ಗಮನದಲ್ಲಿ ಇರಿಸಿಕೊಂಡು, ಈ ಅಪ್‌ಡೇಟ್‌ಗಳನ್ನು ಸೇರಿಸಲಾಗಿದೆ:

8.2. ಸಾಮಾನ್ಯ ಪ್ಲಾಟ್‌ಫಾರ್ಮ್ ಬೆಂಬಲ

ತ್ರಾಟಲಿಂಗ್ ಸ್ಟೇಟ್ (T-ಸ್ಟೇಟ್) ಸೂಚನೆ ಬೆಂಬಲವನ್ನು ಕರ್ನಲ್‌ನಲ್ಲಿ ಅಡ್ವಾನ್ಸಡ್ ಕಾನ್ಫಿಗರೇಶನ್ ಎಂಡ್ ಪವರ್ ಇಂಟರ್ಫೇಸ್ (ACPI) ಗೆ ಅನ್ವಯಿಸಲಾಗಿದೆ. T-ಸ್ಟೇಟ್ ಸೂಚನೆಯನ್ನು ಸೇರಿಸುವುದರಿಂದ ದತ್ತಾಂಸ ಕೇಂದ್ರಗಳಲ್ಲಿ ವಿದ್ಯುಚ್ಛಕ್ತಿಯ ನಿರ್ವಹಣೆ ಮಾಡಲು Intel® ಇಂಟೆಲಿಜೆಂಟ್ ಪವರ್ ನೋಡ್ ಮ್ಯಾನೇಜರ್ ತಂತ್ರಜ್ಞಾನವನ್ನು ಬಳಸಲು ಸಮರ್ಥವಾಗಿರುತ್ತದೆ.(BZ#487567).

8.3. ಚಾಲಕ ಅಪ್‌ಡೇಟ್‌ಗಳು

8.3.1. ಓಪನ್ ಫ್ಯಾಬ್ರಿಕ್ಸ್ ಎಂಟರ್ಪ್ತೈಸ್ ಡಿಸ್ಟ್ರಿಬ್ಯೂಶನ್ (OFED) ಚಾಲಕಗಳು

OpenFabrics ಅಲಯನ್ಸ್ ಎಂಟರ್ಪ್ರೈಸ್ ಡಿಸ್ಟ್ರಿಬ್ಯೂಶನ್ (OFED) ಯು ರಿಮೋಟ್ ಡೈರೆಕ್ಟ್ ಮೆಮೊರಿ ಎಕ್ಸೆಸ್ (RDMA) ತಂತ್ರಜ್ಞಾನವನ್ನು ಬಳಸುವ ಅನ್ವಯಿಕಗಳಿಗಾಗಿನ Infiniband ಹಾಗು iWARP ಯಂತ್ರಾಂಶ ತೊಂದರೆ ನಿವಾರಣಾ ಸೌಲಭ್ಯಗಳು, Infiniband ಫ್ಯಾಬ್ರಿಕ್ ನಿರ್ವಹಣಾ ಡೆಮನ್, Infiniband/iWARP ಕರ್ನಲ್ ಘಟಕ ಲೋಡರ್, ಹಾಗು ಲೈಬ್ರರಿಗಳು ಮತ್ತು ವಿಕಸನಾ ಪ್ಯಾಕೇಜುಗಳ ಒಂದು ಸಂಗ್ರಹವಾಗಿದೆ. Red Hat Enterprise Linux ನಲ್ಲಿ OFED ತಂತ್ರಾಂಶ ಸ್ಟಾಕ್‌ ಅನ್ನು ಅದರ Infiniband/iWARP/RDMA ಯಂತ್ರಾಂಶ ಬೆಂಬಲಕ್ಕಾಗಿನ ಪರಿಪೂರ್ಣ ಸ್ಟಾಕ್ ಬಳಸಲಾಗುತ್ತದೆ.
Red Hat Enterprise Linux 5.4 ರಲ್ಲಿ, OFED ಯ ಈ ಕೆಳಗಿನ ಭಾಗಗಳನ್ನು ಅಪ್‌ಸ್ಟ್ರೀಮ್‌ನ ಆವೃತ್ತಿ 1.4.1-rc3 ಗೆ ಅಪ್‌ಡೇಟ್ ಮಾಡಲಾಗಿದೆ
ಹೆಚ್ಚುವರಿಯಾಗಿ, ಈ ಕೆಳಗಿನ OFED ಚಾಲಕಗಳನ್ನು ಅಪ್‌ಸ್ಟ್ರೀಮ್ ಆವೃತ್ತಿ 1.4.1-rc3 ಗೆ ಅಪ್‌ಡೇಟ್ ಮಾಡಲಾಗಿದೆ:
  • Chelsio T3 ಪಂಗಡದ ಜಾಲಬಂಧ ಸಾಧನಗಳಿಗಾಗಿನ cxgb3 ಹಾಗು iw_cxgb3 ಚಾಲಕಗಳು (BZ#476301, BZ#504906)
  • mthca-ಆಧರಿತವಾದ InfiniBand HCA (Host Channel Adapter) ಚಾಲಕ (BZ#476301, BZ#506097)
  • qlgc_vnic ಚಾಲಕ (BZ#476301)

ಸೂಚನೆ

ಇನ್ನೂ ಸಹ ವಿಕಸನಗೊಳ್ಳುತ್ತಿರುವ OFED ತಂತ್ರಜ್ಞಾನದ ಗರಿಷ್ಟ ಮಟ್ಟದ ಸಾಮರ್ಥ್ಯವನ್ನು ಒದಗಿಸಲು Red Hat ಅದರ ಅಪ್‌ಸ್ಟ್ರೀಮ್‌ ಸಂಕೇತ(ಕೋಡ್) ಮೂಲವನ್ನು ನಿಖರವಾಗಿ ಅನುಸರಿಸುತ್ತದೆ. ಇದರ ಪರಿಣಾಮವಾಗಿ, ಇದರ ಅಪ್‌ಸ್ಟ್ರೀಮ್ ಪರಿಯೋಜನೆಯ ಸಣ್ಣ ಸಣ್ಣ ಬಿಡುಗಡೆಯನ್ನೂ ಸಹ Red Hat ಮಾತ್ರ API/ABI ಸಹವರ್ತನೀಯತೆಯನ್ನು ಕಾಪಾಡಿಕೊಂಡು ಬರುತ್ತದೆ. ಇದು Red Hat Enterprise Linux ನ ವಿಕಸನೆಯಲ್ಲಿ ಸಾಮಾನ್ಯವಾಗಿ ಅನುಸರಿಸಲಾಗುವ ಪ್ರಕ್ರಿಯೆಗಿಂತ ಭಿನ್ನವಾದುದಾಗಿದೆ.

8.3.2. ಸಾಮಾನ್ಯ ಚಾಲಕ ಅಪ್‌ಡೇಟ್‌ಗಳು

  • Intel 5400 ವರ್ಗದ ಮೆಮೊರಿ ಕಂಟ್ರೊಲರುಗಳಿಗಾಗಿನ i5400 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದ್ದು ಎರರ್ ಡಿಟೆಕ್ಷನ್ ಹಾಗು ಕರೆಕ್ಷನ್‌ಗಾಗಿ (EDAC) ಬೆಂಬಲವನ್ನು ಸೇರಿಸಲಾಗಿದೆ. (BZ#462895)
  • iic-bus ಸಂಪರ್ಕಸಾಧನಕ್ಕಾಗಿನ i2c ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ, ಇದು AMD SB800 ಪಂಗಡದ ಉತ್ಪನ್ನಗಳಿಗೆ ಬೆಂಬಲಿಸುತ್ತದೆ.
  • Broadcom HT1100 ಚಿಪ್‌ಸೆಟ್‌ಗೆ ಬೆಂಬಲಿಸುವಂತೆ i2c-piix4 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. (BZ#474240)
  • hpilo ಚಾಲಕವನ್ನು ಅಪ್‌ಡೇಟ್‌ ಮಾಡಲಾಗಿದೆ.(BZ#488964).
  • Davicom ಇತರ್ನೆಟ್ ಅಡಾಪ್ಟರುಗಳಿಗಾಗಿನ dm9601 ಅನ್ನು ಅಪ್‌ಡೇಟ್ ಮಾಡಲಾಗಿದೆ.

8.3.3. ಜಾಲಬಂಧ ಚಾಲಕ ಅಪ್‌ಡೇಟ್‌ಗಳು

  • ಬಾಂಡಿಂಗ್ ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ. ಆದರೆ ಈ ಅಪ್‌ಡೇಟ್ symbol/ipv6 ಘಕಟಕದ ಸಾಮರ್ಥ್ಯಗಳನ್ನು ಪರಿಚಯಿಸಿದೆ. ಆದ್ದರಿಂದ, ಎಲ್ಲಿಯಾದರೂ IPv6 ಅನ್ನು ಈ ಹಿಂದೆ ಅಶಕ್ತಗೊಳಿಸಿದ್ದಲ್ಲಿ (/etc/modprobe.conf ಕಡತದಲ್ಲಿ install ipv6 /bin/false ಸಾಲನ್ನು ಸೇರಿಸುವ ಮೂಲಕ), 5.4 ರಲ್ಲಿರುವ ಬಾಂಡಿಂಗ್ ಚಾಲಕವನ್ನು ಅಪ್ಡೇಟ್ ಮಾಡುವುದರಿಂದ ಅದು ಬಾಂಡಿಂಗ್ ಕರ್ನಲ್ ಘಟಕವು ಲೋಡ್ ಆಗುವುದನ್ನು ವಿಫಲಗೊಳಿಸುತ್ತದೆ. ಘಟಕವು ಸರಿಯಾಗಿ ಕೆಲಸ ಮಾಡಲು install ipv6 /bin/false ಸಾಲನ್ನು install ipv6 "disable=1 ಇಂದ ಬದಲಾಯಿಸಬೇಕು.
  • ಕರ್ನಲ್‌ನಲ್ಲಿ Intel® I/O Acceleration Technology ಗಾಗಿನ (Intel® I/OAT) ಚಾಲಕವನ್ನು ಆವೃತ್ತಿ 2.6.24 ಗೆ ಅಪ್‌ಡೇಟ್ ಮಾಡಲಾಗಿದೆ.(BZ#436048).
  • Intel® Gigabit ಎತರ್ನೆಟ್ ಅಡಾಪ್ಟರುಗಳಿಗಾಗಿನ igb ಚಾಲಕವನ್ನು ಆವೃತ್ತಿ 1.3.16-k2 ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ igb ಚಾಲಕಕ್ಕಾಗಿನ GRO ಬೆಂಬಲವನ್ನು ಒದಗಿಸುತ್ತದೆ. (BZ#484102, BZ#474881, BZ#499347).
  • igbvf ಅನ್ನು ಅಪ್‌ಡೇಟ್ ಮಾಡಲಾಗಿದ್ದು, ಇದು Intel 82576 Gigabit ಎತರ್ನೆಟ್ ಕಂಟ್ರೋಲರುಗಳಿಗೆ ವರ್ಚುವಲ್ ಫಂಕ್ಷನ್ ಬೆಂಬಲವನ್ನು ಒದಗಿಸುತ್ತದೆ. (BZ#480524)
  • Intel 10 Gigabit PBetaCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಆವೃತ್ತಿ 2.0.8-k2 ಗೆ ಆಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ixgbe ಚಾಲಕಕ್ಕಾಗಿನ GRO ಬೆಂಬಲವನ್ನೂ ಸಹ ಸೇರಿಸುತ್ತದೆ. (BZ#472547, BZ#499347).
  • Broadcom NetXtreme II ಜಾಲಬಂಧ ಸಾಧನಗಳಿಗಾಗಿನ bnx2 ಚಾಲಕವನ್ನು ಆವೃತ್ತಿ 1.9.3 ಗೆ ಅಪ್‌ಡೇಟ್ ಮಾಡಲಾಗಿದೆ (BZ#475567 BZ#476897 BZ#489519)
  • Broadcom Tigon3 ಎತರ್ನೆಟ್ ಸಾಧನಗಳಿಗಾಗಿ tg3 ಚಾಲಕವನ್ನು ಆವೃತ್ತ 3.96 ಗೆ ನವೀಕರಿಸಲಾಗಿದೆ. (BZ#481715, BZ#469772). ಈ ಚಾಲಕ ಅಪ್‌ಡೇಟ್ 5785F ಹಾಗು 50610M ಸಾಧನಗಳಿಗೆ ಬೆಂಬಲವನ್ನು ಒದಗಿಸುತ್ತದೆ. (BZ#506205)
  • cnic ಚಾಲಕವನ್ನು ಸೇರಿಸಲಾಗಿದ್ದು, ಇದು bnx2 ಜಾಲಬಂಧ ಸಾಧನಗಳಿಗೆ ಇಂಟರ್ನೆಟ್ ಸ್ಮಾಲ್ ಕಂಪ್ಯೂಟರ್ ಸಿಸ್ಟಂ ಇಂಟರ್ಫೇಸ್ (iSCSI) ಬೆಂಬಲವನ್ನು ಒದಗಿಸುತ್ತದೆ. (BZ#441979).
  • Broadcom Everest ಜಾಲಬಂಧ ಸಾಧನಗಳಿಗಾಗಿನ bnx2x ಚಾಲಕವನ್ನು ಆವೃತ್ತ 1.48.105 ಗೆ ಅಪ್‌ಡೇಟ್ ಮಾಡಲಾಗಿದೆ.(BZ#475481).
  • bnx2i ಚಾಲಕವನ್ನು ಸೇರಿಸಲಾಗಿದ್ದು, ಇದು bnx2x ಜಾಲಬಂಧ ಸಾಧನಗಳಿಗೆ iSCSI ಬೆಂಬಲವನ್ನು ನೀಡುತ್ತದೆ. (BZ#441979).
  • Chelsio T3 ಪಂಗಡದ ಜಾಲಬಂಧ ಸಾಧನಗಳಿಗಾಗಿನ cxgb3 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದ್ದು, ಇದು iSCSI TCP ಆಫ್‌ಲೋಡ್ ಎಂಜಿನ್‌ಗಳು (TOE) ಹಾಗು ಜನರಿಕ್ ರಿಸೀಫ್ ಆಫ್‌ಲೋಡ್ (GRO) ಬೆಂಬಲವನ್ನು ಶಕ್ತಗೊಳಿಸುತ್ತದೆ. (BZ#439518, BZ#499347)
  • NVIDIA nForce ಸಾಧನಗಳಿಗಾಗಿನ forcedeth ಎತರ್ನೆಟ್ ಚಾಲಕವನ್ನು 0.62 ಗೆ ಅಪ್‌ಡೇಟ್ ಮಾಡಲಾಗಿದೆ. (BZ#479740).
  • Marvell Yukon 2 ಚಿಪ್‌ಸೆಟ್ ಅನ್ನು ಬಳಸುವ ಎತರ್ನೆಟ್ ನಿಯಂತ್ರಕಗಳಿಗಾಗಿನ sky2 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. (BZ#484712).
  • Cisco 10G ಎತರ್ನೆಟ್ ಸಾಧನಗಳಿಗಾಗಿನ enic ಚಾಲಕವನ್ನು 1.0.0.933 ಗೆ ಅಪ್‌ಡೇಟ್ ಮಾಡಲಾಗಿದೆ. (BZ#484824)
  • Intel PRO/1000 ಎತರ್ನೆಟ್ ಸಾಧನಗಳಿಗಾಗಿನ e1000e ಚಾಲಕವನ್ನು ಅಪ್‌ಸ್ಟ್ರೀಮ್ ಆವೃತ್ತಿ 1.0.2-k2 ಗೆ ಅಪ್‌ಡೇಟ್ ಮಾಡಲಾಗಿದೆ. (BZ#480241)
  • Emulex Tiger Shark ಒಮ್ಮುಖಗೊಂಡ ಅಡಾಪ್ಟರಿಗಳಿಗಾಗಿನ be2net ಚಾಲಕವನ್ನು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ.

8.3.4. ಶೇಖರಣಾ ಚಾಲಕ ಅಪ್‌ಡೇಟ್‌ಗಳು

  • bnx2 ಚಾಲಕವು ಈಗ iSCSI ಅನ್ನು ಬೆಂಬಲಿಸುತ್ತದೆ. bnx2i ಚಾಲಕವು iSCSI ಆಫ್‌ಲೋಡ್ ಬೆಂಬಲವನ್ನು ಒದಗಿಸುವ ಸಲುವಾಗಿ cnic ಘಟಕದ ಮೂಲಕ bnx2 ಚಾಲಕವನ್ನು ನಿಲುಕಿಸಿಕೊಳ್ಳುತ್ತದೆ. bnx2i ಅನ್ನು ನಿರ್ವಹಿಸಲು, iscsi-initiator-utils ಪ್ಯಾಕೇಜನ್ನು ಬಳಸಿ. bnx2i ಸಂರಚನೆಯ ಬಗೆಗಿನ ಮಾಹಿತಿಗಾಗಿ, ದಯವಿಟ್ಟು /usr/share/docs/iscsi-initiator-utils-<version>/README ಕಡತದಲ್ಲಿನ section 5.1.2 ಅನ್ನು ನೋಡಿ. (BZ#441979 ಹಾಗು BZ#441979)
    ಈ ಬಿಡುಗಡೆಯಲ್ಲಿ ಸೇರಿಸಲಾದ bnx2i ಆವೃತ್ತಿಯು IPv6 ಅನ್ನು ಬೆಂಬಲಿಸುವುದಿಲ್ಲ.
  • bitmap merging ಗೆ ಬೆಂಬಲವನ್ನು ನೀಡುವಂತೆ md ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. ಈ ಸವಲತ್ತಿನಿಂದಾಗಿ, ದತ್ತಾಂಶದ ತದ್ರೂಪುಗೊಳಿಕೆ ಕಾರ್ಯವನ್ನು ನಿರ್ವಹಿಸುವಾಗ ಸಂಪೂರ್ಣ ಪ್ರಮಾಣದ resync ನಡೆಸುವ ಅಗತ್ಯವಿರುವುದಿಲ್ಲ. (BZ#481226)
  • ಈ ಬಿಡುಗಡೆಯಲ್ಲಿನ scsi ಪದರವು ಈ ಕೆಳಗಿನ ಅಪ್‌ಡೇಟ್‌ಗಳನ್ನು ಹೊಂದಿರುತ್ತದೆ:
    • scsi ಚಾಲಕವು ಈಗ ಅಪ್ಸ್ಟ್ರೀಮ್‌ನ scsi_dh_alua ಘಟಕವನ್ನು ಹೊಂದಿರುತ್ತದೆ. ಇದು ಈ ಬಿಡುಗಡೆಯೊಂದಿಗೆ asymmetric logical unit access (ALUA) ಬೆಂಬಲವನ್ನು ಸೇರರಿಸುತ್ತದೆ. dm-multipath ಅನ್ನು ಬಳಸುವಾಗ scsi_dh_alua ಘಟಕವನ್ನು ಉಪಯೋಗಿಸಲು, multipah.conf ನಲ್ಲಿ alua ಅನ್ನುhardware_handler ಬಗೆಯಾಗಿ ಸೂಚಿಸಿ. (BZ#482737)
      EMC Clariion ಸಾಧನಗಳಿಗೆ, ಕೇವಲ scsi_dh_alua ಅಥವ dm-emc ಅನ್ನು ಬಳಸಲು ಬೆಂಬಲವಿರುವುದಿಲ್ಲ ಎಂಬುವುದನ್ನು ನೆನಪಿಡಿ. scsi_dh_alua ಹಾಗು dm-emc ಎರಡನ್ನೂ ಬಳಸುವುದಕ್ಕೆ ಬೆಂಬಲವಿರುವುದಿಲ್ಲ.
    • rdac_dev_list ರಚನೆಯು ಈಗ md3000 ಹಾಗು md3000i ನಮೂದುಗಳನ್ನು ಹೊಂದಿರುತ್ತದೆ. ಇದರಿಂದಾಗಿ iscsi_dh_rdac ಘಟಕದಿಂದ ಒದಗಿಸಲಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. (BZ#487293)
    • ಡಿಸ್ಕಿನ ಫಾರ್ಮಾಟ್‌ ಮಾಡುವ ಸಮಯದಲ್ಲಿ iSCSI iBFT ಅನುಸ್ಥಾಪನೆಗಳು ದಿಗಿಲಿಗೆ(ಪ್ಯಾನಿಕ್) ಕಾರಣವಾಗಿದ್ದಂತಹ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ. (BZ#436791)
    • ಕೆಲವು ಬಹುಮಾರ್ಗೀಯ(ಮಲ್ಟಿಪಾತ್) ಪರಿಸರದಲ್ಲಿ iSCSI ಫೇಲ್ಓವರುಗಳ ಸಮಯದಲ್ಲಿ ಕರ್ನಲ್ ಪ್ಯಾನಿಕ್‌ಗಳಿಗೆ ಕಾತಣವಾಗುತ್ತಿದ್ದಂತಹ iscsi_r2t_rsp struct ನಲ್ಲಿದ್ದ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ. (BZ#484455)
  • cxgb3 ಚಾಲಕವನ್ನು ಹಲವಾರು ಅಪ್‌ಸ್ಟ್ರೀಮ್ ದೋಷ ನಿವಾರಣೆಗಳನ್ನು ಅನ್ವಯಿಸುವಂತೆ ಹಾಗು iSCSI TOE ಸಾಧನಗಳಿಗೆ ಬೆಂಬಲ ನೀಡುವಂತೆ ಅಪ್‌ಡೇಟ್ ಮಾಡಲಾಗಿದೆ. (BZ#439518)
    ಈ ಬಿಡುಗಡೆಯಲ್ಲಿ ಸೇರಿಸಲಾದ cxgb3i ಆವೃತ್ತಿಯು IPv6 ಅನ್ನು ಬೆಂಬಲಿಸುವುದಿಲ್ಲ.
  • ಈ ಬಿಡುಗಡೆಯಲ್ಲಿ mpt2sas ಎಂಬ ಹೊಸ ಚಾಲಕವನ್ನು ಸೇರಿಸಲಾಗಿದೆ. ಈ ಚಾಲಕವು LSI ಲಾಜಿಕ್‌ನ SAS-2 ಪಂಗಡದ ಅಡಾಪ್ಟರುಗಳನ್ನು ಬೆಂಬಲಿಸುತ್ತದೆ. SAS-2 ದತ್ತಾಂಶ ವರ್ಗಾವಣೆ ವೇಗವನ್ನು 3Gb/s ಯಿಂದ 6Gb/s ಗೆ ಹೆಚ್ಚಿಸುತ್ತದೆ.
    mpt ಚಾಲಕಗಳು ಇರುತ್ತಿದ್ದಂತಹ drivers/message/fusion ಕೋಶಗಳಿಗೆ ಬದಲಾಗಿ mpt2sas ಚಾಲಕವು drivers/scsi/mpt2sas ಕೋಶದಲ್ಲಿ ಇರುತ್ತದೆ. (BZ#475665)
  • aacraid ಚಾಲಕವನ್ನು ಆವೃತ್ತಿ 1.1.5-2461 ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ಸರತಿಯಲ್ಲಿನ ಸ್ಕ್ಯಾನ್‌ಗಳು, ನಿಯಂತ್ರಕದ ಬೂಟ್‌ ತೊಂದರೆಗಳು ಹಾಗು ಇತರೆ ಸಮಸ್ಯೆಗಳಿಗೆ ಕಾರಣವಾದಂತಹ ಹಲವಾರು ಅಪ್‌ಸ್ಟ್ರೀಮ್ ದೋಷ ನಿವಾರಣೆಗಳನ್ನು ಅನ್ವಯಿಸುವಂತೆ. (BZ#475559)
  • aic7xxx ಚಾಲಕದಲ್ಲಿ ಈಗ ಹೆಚ್ಚಿಸಲಾದ I/O ಗಾತ್ರವು ಕಂಡುಬರುತ್ತದೆ. ಇದರಿಂದಾಗಿ ಬೆಂಬಲಿತವಾದ ಸಾಧನಗಳು (SCSI ಟೇಪ್ ಸಾಧನಗಳಂತಹ) ಹೆಚ್ಚು ಬಫರಿನೊಂದಿಗೆ ಬರೆಯುವ ಕಾರ್ಯವನ್ನು ನಿರ್ವಹಿಸುತ್ತವೆ.
  • cciss ಚಾಲಕವನ್ನು ಮೆಮೊರಿ BAR ಪರಿಶೋಧನೆ, rebuild_lun_table ಹಾಗು MSA2012 ಸ್ಕ್ಯಾನ್ ಎಳೆ(ತ್ರೆಡ್) ಮೇಲೆ ಪರಿಣಾಮ ಬೀರುವಂತಹ ದೋಷಗಳಿಗೆ ಪರಿಹಾರವನ್ನು ಅನ್ವಯಿಸುವಂತೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ cciss ನ ಹಲವಾರು ಸಂರಚನಾ ಬದಲಾವಣೆಗಳನ್ನು ಅನ್ವಯಿಸುತ್ತದೆ.
  • fnic ಚಾಲಕವನ್ನು ಆವೃತ್ತಿ 1.0.0.1039 ಗೆ ಅಪ್‌ಡೇಟ್ ಮಾಡಲಾಗಿದೆ. ಇದು ಹಲವಾರು ಅಪ್‌ಸ್ಟ್ರೀಮ್ ದೋಷ ಪರಿಹಾರಗಳನ್ನು ಅನ್ವಯಿಸಲಿದ್ದು, ಇದು libfc ಹಾಗು fcoe ಘಟಕಗಳಿಗೆ ಅಪ್‌ಡೇಟ್ ಮಾಡುತ್ತದೆ, ಹಾಗು ಚಲಾವಣಾ ಸಮಯದಲ್ಲಿ ದೋಷನಿವಾರಣೆಯ ದಾಖಲೆಯನ್ನು ನಿಯಂತ್ರಿಸುವ ಹೊಸ ಘಟಕ ನಿಯತಾಂಕವನ್ನು ಸೇರಿಸುತ್ತದೆ. (BZ#484438)
  • ipr ಚಾಲಕವು ಈಗ MSI-X ತಡೆಗಳನ್ನು ಬೆಂಬಲಿಸುತ್ತದೆ. (BZ#475717)
  • lpfc ಚಾಲಕವನ್ನು ಈಗ ಆವೃತ್ತಿ 8.2.0.48 ಗೆ ಅಪ್‌ಡೇಟ್ ಮಾಡಲಾಗಿದೆ. ಇದು ಮುಂಬರುವ OEM ಪ್ರೊಗ್ರಾಮುಗಳಿಗೆ ಯಂತ್ರಾಂಶ ಬೆಂಬಲವನ್ನು ಒದಗಿಸುತ್ತದೆ. ಇದರ ಜೊತೆಗೆ, ಈ ಅಪ್‌ಡೇಟ್ ಈ ಕೆಳಗಿನ ದೋಷ ಪರಿಹಾರಗಳನ್ನು (ಇತರೆಯವುಗಳ ಜೊತೆಗೆ) ಅನ್ವಯಿಸುತ್ತದೆ:(BZ#476738 and BZ#509010)
    • ವರ್ಚುವಲೈಸ್ಡ್ ಫೈಬರ್-ಚಾನಲ್ ಸ್ವಿಚ್‌ಗಳಿಗೆ ಈಗ ಬೆಂಬಲವಿದೆ.
    • ದೋಷ ಎಚ್ಚರಿಕೆ ತಡೆಗಳಿಗೆ ಪೋಲಿಂಗ್ ಮಾಡುವುದು ಈಗ ಲಭ್ಯವಿದೆ.
    • vport create ಹಾಗು delete loop ನಲ್ಲಿ ಮೆಮೊರಿ ಸೋರಿಕೆಗಳಿಗೆ ಕಾರಣವಾದಂತಹ ಒಂದು ದೋಷವನ್ನು ಈಗ ನಿವಾರಿಸಲಾಗಿದೆ.
    ಈ ಅಪ್‌ಡೇಟ್‌ನೊಂದಿಗೆ, lpfc ಚಾಲಕವು ಈಗ HBAnyware 4.1 ಹಾಗು OneConnect UCNA ಅನ್ನೂ ಸಹ ಬೆಂಬಲಿಸುತ್ತದೆ. (BZ#498524)
  • MPT fusion ಚಾಲಕವನ್ನು ಈಗ ಆವೃತ್ತಿ3.04.07rh v2 ಗೆ ಅಪ್‌ಡೇಟ್ ಮಾಡಲಾಗಿದೆ. ಇದು ಹಲವಾರು ದೋಷ ಪರಿಹಾರಗಳನ್ನು ಅನ್ವಯಿಸುತ್ತದೆ, ಅವುಗಳೆಂದರೆ: (BZ#475455)
    • PAE ಕರ್ನಲ್‌ನಲ್ಲಿ ಬೂಟ್‌ ಆಗದೆ ಇರುವಂತೆ ತಡೆಯುತ್ತಿಂದಂತಹ MPT fusion ಚಾಲಕದಲ್ಲಿನ ಒಂದು ದೋಷವನ್ನು ಈಗ ಸರಿಪಡಿಸಲಾಗಿದೆ.
    • ಚಾಲಕಗಳು ಅನ್‌ಲೋಡ್‌ ಆದಾಗ ನಿಯಂತ್ರಕಗಳನ್ನು ಈಗ READY_STATE ಗೆ ಹೊಂದಿಸಲಾಗುತ್ತದೆ.
    • ಒಂದು ವರ್ಗಾವಣೆ ಪದರವನ್ನು ಸೇರಿಸುವ ಮೊದಲು mptsas ಚಾಲಕವು ಈಗ TUR ಅನ್ನು (Test Unit Ready) ಹಾಗು Report LUN ಆಜ್ಞೆಗಳನ್ನು ಚಲಾಯಿಸುತ್ತದೆ.
    ಇದರ ಜೊತೆಗೆ, ಅನಿರೀಕ್ಷಿತವಾಗಿ mptctl_ioctl() ಯು ಹಲವಾರು ಇನ್ನೂ ಸಹ ಮಾರಕವಲ್ಲದ ಕರ್ನಲ್ ದೋಷ ಸಂದೇಶಗಳನ್ನು ಒದಗಿಸಲು ಕಾರಣವಾಗಿದ್ದಂತಹ ಒಂದು ತೇಪೆಯನ್ನು(ಪ್ಯಾಚ್) ಹಿಂದಕ್ಕೆ ಮರಳಿಸಿಲಾಗಿದೆ. ಈ ಬಿಡುಗಡೆಯೊಂದಿಗೆ, mptctl_ioctl() ಇನ್ನು ಮುಂದೆ ಈ ಕರ್ನಲ್ ದೋಷಗಳನ್ನು ತೋರಿಸುವುದಿಲ್ಲ.
  • megaraid_sas ಚಾಲಕವನ್ನು ಈಗ ಆವೃತ್ತಿ 4.08-RH1 ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ಈ ಕೆಳಗಿನ ಅಪ್‌ಸ್ಟ್ರೀಮ್ ಸುಧಾರಣೆಗಳನ್ನು ಹಾಗು ದೋಷ ಪರಿಹಾರಗಳನ್ನು (ಇತರೆಯವುಗಳ ಜೊತೆಗೆ) ಅನ್ವಯಿಸುತ್ತದೆ:(BZ#475574)
    • ಈ ಅಪ್‌ಡೇಟ್‌, ಚಾಲಕಕ್ಕೆ ಒಂದು ಪೋಲಿಂಗ್ ಕ್ರಮವನ್ನು ಸೇರಿಸುತ್ತದೆ.
    • ಬೆಂಬಲಿತವಾದ ಟೇಪ್ ಡ್ರೈವ್‌ಗಳ ಮೇಲೆ ಪರಿಣಾಮ ಬೀರುತ್ತಿದ್ದಂತಹ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ. ಈ ಬಿಡುಗಡೆಯೊಂದಿಗೆ, ಈಗ ಟೇಪ್‌ ಡ್ರೈವ್‌ಗಳಿಗೆ ಕಳುಹಿಸಲಾದ ಆಜ್ಞೆಗಳಿಗಾಗಿ pthru ಕಾಲಾವಧಿ ತೀರಿಕೆಯ ಮೌಲ್ಯವನ್ನು O/S ಪದರದ ಕಾಲಾವಧಿ ತೀರಿಕೆ ಮೌಲ್ಯಕ್ಕೆ ಹೊಂದಿಸಲಾಗಿದೆ.
  • mvsas ಚಾಲಕವನ್ನು ಈಗ ಆವೃತ್ತಿ 0.5.4 ಗೆ ಅಪ್‌ಡೇಟ್ ಮಾಡಲಾಗಿದೆ. ಇದು ಅಪ್‌ಸ್ಟ್ರೀಮಿನಿಂದ ಹಲವಾರು ದೋಷ ಪರಿಹಾರಗಳನ್ನು ಹಾಗು ಸುಧಾರಣೆಗಳನ್ನು ಅನ್ವಯಿಸುತ್ತದೆ ಹಾಗು Marvell RAID ಬಸ್ ನಿಯಂತ್ರಕಗಳಾದ MV64460, MV64461, MV64462 ಗೆ ಬೆಂಬಲವನ್ನು ಒದಗಿಸುತ್ತದೆ. (BZ#485126)
  • qla2xxx ಚಾಲಕವನ್ನು ಆವೃತ್ತಿ 8.03.00.10.05.04-k ಗೆ ಅಪ್‌ಡೇಟ್ ಮಾಡಲಾಗಿದ್ದು, ಹಾಗು ಈಗ ಫೈಬರ್ ಚಾನಲ್ ಓವರ್ಕನವರ್ಜೆನ್ಸ್ ಎನ್‌ಹ್ಯಾನ್ಸಡ್ ಎತರ್ನೆಟ್ ಅಡಾಪ್ಟರುಗಳಿಗೆ ಬೆಂಬಲ ನೀಡಲಾಗಿದೆ. ಈ ಬಿಡುಗಡೆಯೊಂದಿಗೆ, qla2xxx ಯು ಸಹ ಅಪ್‌ಸ್ಟ್ರೀಮ್‌ನಿಂದ ಹಲವಾರು ದೋಷ ಪರಿಹಾರಗಳನ್ನು ಅನ್ವಯಿಸುತ್ತದೆ, ಇವುಗಳೆಂದರೆ: (BZ#471900, BZ#480204, BZ#495092, ಹಾಗು BZ#495094)
    • 4GB ಹಾಗು 8GB ಅಡಾಪ್ಟರುಗಳಲ್ಲಿ OVERRUN ನಿಭಾಯಿಸುವಾಗ ಎದುರಾಗುತ್ತಿದ್ದಂತಹ ಅಸಮಂಜಸತೆಯನ್ನು ಈಗ ಸರಿಪಡಿಸಲಾಗಿದೆ.
    • ಎಲ್ಲಾ vports ಈಗ ಯಾವುದೆ ತಾಳೆಯಾಗದ ಘಟನೆಗಳಿಗೆ ಎಚ್ಚರಿಕೆಯನ್ನು ನೀಡುತ್ತದೆ.
    • QLogic 2472 ಕಾರ್ಡಿನೊಂದಿಗೆ ಕರ್ನಲ್ ಪ್ಯಾನಿಕ್‌ಗಳಿಗೆ ಕಾರಣವಾದಂತಹ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ.
    • stop_firmware ಆಜ್ಞೆಯ ಮೊದಲನೆ ಪ್ರಯತ್ನವು ವಿಫಲಗೊಂಡಲ್ಲಿ ಇನ್ನು ಮುಂದೆ ಮರಳಿ ಪ್ರಯತ್ನಿಸಲಾಗುವುದಿಲ್ಲ.
    • ವಿಭಾಗ ಮಾಸ್ಕ್ ಮೌಲ್ಯವು ಇನ್ನು ಮುಂದೆ optrom ಗಾತ್ರದ ಮೇಲೆ ಆಧರಿತವಾಗಿರುವುದಿಲ್ಲ.
    • ಬಹುಮಾರ್ಗೀಯ(ಮಲ್ಟಿಪಾತ್) ಸಾಧನಗಳಲ್ಲಿ I/O ಯ ಸಮಯದಲ್ಲಿ ಪದೆ ಪದೆ ಮಾರ್ಗ ವಿಫಲತೆಗಳಿಗೆ ಕಾರಣವಾಗುತ್ತಿದ್ದಂತಹ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ. (BZ#244967)
    • ಚಾಲಕದ ಆಕರ ಸಂಕೇತವು ಈಗ kABI-ಸಹವರ್ತನೀಯವಾಗಿರುತ್ತದೆ.
    • ಮೆಮೊರಿಯನ್ನು ಮುಕ್ತಗೊಳಿಸಿದ ನಂತರ dcbx ಸೂಚಕಗಳನ್ನು ಈಗ NULL ಗೆ ಹೊಂದಿಸಲಾಗಿದೆ.
    ಈ ಅಪ್‌ಡೇಟ್‌ಗಳ ಜೊತೆಗೆ, qla2xxx ಚಾಲಕದಲ್ಲಿ ಸೇರ್ಪಡಿಸಲಾದಂತಹ qla24xx ಹಾಗು qla25xx ಫರ್ಮ್-ವೇರುಗಳನ್ನು ಈಗ ಆವೃತ್ತಿ 4.04.09 ಅಪ್‌ಡೇಟ್ ಮಾಡಲಾಗಿದೆ.
  • qla4xxx ಚಾಲಕವು ಈಗ ಸುಧಾರಿತ ಚಾಲಕ ವಿಫಲತೆಯ ಸುಸ್ಥಿತಿಗೆ ಮರಳಿಸುವ ಸವಲತ್ತನ್ನು ಹೊಂದಿದೆ. ಅತಿಥೇಯ ಅಡಾಪ್ಟರಿನಲ್ಲಿ ಬಾಕಿ ಇರುವ ಆಜ್ಞೆಗಳು ಪತ್ತೆಯಾದಲ್ಲಿ ಅಡಾಪ್ಟರನ್ನು ಸುಸ್ಥಿತಿಗೆ ಮರಳಿಸುವುದನ್ನು ತಡೆಯುತ್ತಿದ್ದಂತಹ ಒಂದು ದೋಷವನ್ನು ಈ ಅಪ್‌ಡೇಟ್‌ನಲ್ಲಿ ಸರಿಪಡಿಸಲಾಗಿದೆ. (BZ#497478)
  • ಈ ಬಿಡುಗಡೆಯು ಹೊಸ qlge ಚಾಲಕವನ್ನು ಹೊಂದಿದೆ. ಈ ಸಾಧನವು QLogic FCoE 10GB ಅಡಾಪ್ಟರುಗಳಿಗೆ ಎತರ್ನೆಟ್ ಬೆಂಬಲವನ್ನು ಒದಗಿಸುತ್ತದೆ. (BZ#479288)

9. ತಂತ್ರಜ್ಞಾನ ಮುನ್ನೋಟಗಳು

ತಂತ್ರಜ್ಞಾನ ಮುನ್ನೋಟ ಸವಲತ್ತುಗಳನ್ನು ಪ್ರಸಕ್ತRed Hat Enterprise Linux ಚಂದಾ ಸೇವೆಗಳಲ್ಲಿ ಬೆಂಬಲಿಸಲಾಗುವುದಿಲ್ಲ, ಅವುಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸದೆ ಇರುವ ಸಾಧ್ಯತೆ ಇರುತ್ತದೆ ಹಾಗು ಅವುಗಳನ್ನು ಉತ್ಪಾದನಾ ಬಳಕೆಗೆ ಉಪಯೋಗಿಸುವುದು ಸೂಕ್ತವಲ್ಲ. ಆದರೆ ಈ ಸವಲತ್ತುಗಳನ್ನು ಬಳಕೆದಾರರ ಅನುಕೂಲಕ್ಕೆಂದು ಸೇರ್ಪಡಿಸಲಾಗಿದ್ದು ಹಾಗು ಸೌಕರ್ಯವನ್ನು ವಿಸ್ತಾರವಾದ ಪ್ರಚಾರಕ್ಕಾಗಿ ನೀಡಲಾಗಿದೆ.
Red Hat Enterprise Linux 5.4 ಬೀಟಾದಲ್ಲಿ ಈ ಕೆಳಗಿನ ತಂತ್ರಜ್ಞಾನ ಮುನ್ನೋಟಗಳನ್ನು ಹೊಸತಾಗಿ ಅಥವ ಉತ್ತಮಪಡಿಸಲಾಗಿದೆ. Red Hat Enterprise Linux 5.4 ರಲ್ಲಿನ ತಂತ್ರಜ್ಞಾನ ಮುನ್ನೋಟಗಳ ಬಗೆಗಿನ ವಿವರವಾದ ಮಾಹಿತಿಗಳಿಗಾಗಿ, http://www.redhat.com/docs/manuals/enterprise/ ನಲ್ಲಿರುವ 5.4 ರ ತಾಂತ್ರಿಕ ಟಿಪ್ಪಣಿಗಳಲ್ಲಿನ ತಂತ್ರಜ್ಞಾನ ಮುನ್ನೋಟಗಳ ವಿಭಾಗವನ್ನು ನೋಡಿ

A. ಪುನರಾವರ್ತನೆಯ ಇತಿಹಾಸ

ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 0.4Thu Jul 23 2009Don Domingo
SME ತಂತ್ರಜ್ಞಾನ ಅವಲೋಕನಕ್ಕಾಗಿನ ಸಂಸ್ಕರಿತ ಶೇಖರಣಾ ಚಾಲಕ ಅಪ್‌ಡೇಟ್‌ಗಳ ವಿಭಾಗ
ಪರಿಷ್ಕರಣೆ 0.3Thu Jul 02 2009Ryan Lerch
ಹಲವಾರು ಕಾಗುಣಿತ ದೋಷಗಳನ್ನು ಸರಿಪಡಿಸಲಾಗಿದ್ದು, ಜೊತೆಗೆ ಬೀಟಾ ನಿಶ್ಚಿತವಾದ ತಿಳಿದಿರುವ ತೊಂದರೆಗಳನ್ನು ಸೇರಿಸಲಾಗಿದೆ.
ಪರಿಷ್ಕರಣೆ 0.2Wed Jul 01 2009Ryan Lerch
ಬೀಟಾ ಬಿಡುಗಡೆ ಟಿಪ್ಪಣಿಗಳು.
ಪರಿಷ್ಕರಣೆ 0.1Tue Apr 21 2009Ryan Lerch
5.3 ಬಿಡುಗಡೆ ಟಿಪ್ಪಣಿಗಳಿಂದ ಸೂಕ್ತವಾದ ವಿಷಯಗಳನ್ನು ಜರುಗಿಸಲಾಗಿದೆ.